ಆತೂರು: ಆಯಿಶಾ ಹೆಣ್ಮಕ್ಕಳ ಪಪೂ ಕಾಲೇಜಿಗೆ 100 ಶೇ. ಫಲಿತಾಂಶ
ಪುತ್ತೂರು, ಎ.11: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಆತೂರು ಆಯಿಶಾ ಹೆಣ್ಮಕ್ಕಳ ಪಪೂ ಕಾಲೇಜು ಕಲಾ ವಿಭಾಗ ಮತ್ತು ವಾಣಿಜ್ಯ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ,
ಕಲಾ ವಿಭಾಗದಲ್ಲಿ ಸೈಪುನ್ನಿಸಾ 571 ( 95.16%) ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 5 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಅಫ್ರಿದಾ 589(98.16%), ಫಾತಿಮಾ ಅಸ್ನಾ 585(97.5%), ಕೆ.ಶಹನಾಝ್ 584 (97.33%), ಅಮೀನಾ ಹೈಫಾ 579( 96.5%), ಬಿ.ಕೆ.ಅಫ್ರೀನಾ ಫಾತಿಮಾ 576 (96%), ಖದೀಜ ನಿಹಾಲ 575 (95.83%), ಫಾತಿಮಾತ್ ಮುರ್ಶಿದಾ 574 ( 95.66%), ಅಸ್ಮತ್ ಅಫ್ರಾ 573 (95.5%), ಫಾತಿಮಾ ರಿಫಾ 568 (94.66%), ಫಾತಿಮ ಸವ್ಹಾನಾ 567 (94.5%), ಮರಿಯಮ್ ಝರಿನಾ 553 (92.16%), ಆಯಿಶತ್ ಸನ 550 (91.66%), ಫಾತಿಮ ಫರ್ಹಾನಾ 547 (91.16%), ಫಾತಿಮ ಝಾಹಿಮಾ 542 90.33%), ಫಮಿಝಾ ಫರ್ಹಾನಾ 538 (89.66%), ವಫಾ ಸುಮಯ್ಯಾ 536 ( 89.66%), ಫಾತಿಮತ್ತ್ ಹರ್ಶಿದಾ 532 ( 88.66%) ಸಹಿತ 24 ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 9 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.