ಅಡ್ಕರೆಪಡ್ಪು: ಮುಹ್ಯಿದ್ದೀನ್ ಜುಮಾ ಮಸೀದಿ, ರಹ್ಮಾನಿಯ್ಯ ಮದ್ರಸದಲ್ಲಿ ಸ್ವಾತಂತ್ರ್ಯೋತ್ಸವ
Update: 2025-08-19 19:35 IST
ದೇರಳಕಟ್ಟೆ: ಮುಹ್ಯಿದ್ದೀನ್ ಜುಮಾ ಮಸೀದಿ ಹಾಗೂ ರಹ್ಮಾನಿಯ್ಯ ಮದ್ರಸ ಅಡ್ಕರೆಪಡ್ಪು, ಬೆಳ್ಮ ಇದರ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಮಸೀದಿ ವಠಾರದಲ್ಲಿ ನಡೆಯಿತು.
ಜಮಾಅತ್ ಅಧ್ಯಕ್ಷ ಜಾಫರ್‌ರವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಮದ್ರಸ ಮುಖ್ಯೋಪಾಧ್ಯ ಹನೀಫ್ ಸಅದಿ ಅಲ್ ಫುರ್ಖಾಣಿ ಉದ್ಘಾಟಿಸಿದರು. ಖತೀಬ್ ಮುಹಮ್ಮದ್ ಹಿಕಮಿರವರು ಸಂದೇಶ ಭಾಷಣ ಮಾಡಿದರು.
ಅಧ್ಯಾಪಕರಾದ ಕೆ.ಎಚ್. ಇಸ್ಮಾಈಲ್ ಮುಸ್ಲಿಯಾರ್, ಅಬ್ದುಲ್ ಹಮೀದ್ ಮದನಿ, ಜಮಾಅತ್ ಕಾರ್ಯದರ್ಶಿ ಮುಹಮ್ಮದ್ ಮುಸ್ತಫ, ಕೋಶಾಧಿಕಾರಿ ಬಿ.ಕೆ. ಮುಹಮ್ಮದ್, ಉಸ್ತುವಾರಿ ಎ.ಬಿ. ಹುಸೈನ್ ಹಾಗೂ ಜಮಾಅತ್ ಕಮಿಟಿ ಸದಸ್ಯರು ಉಪಸ್ಥಿತರಿದ್ದರು. ಮುಹಮ್ಮದ್ ಮುಸ್ತಫಾ ಸಅದಿ ಸ್ವಾಗತಿಸಿ, ನಿರೂಪಿಸಿದರು.