×
Ad

ಕಟ್ಟಡ ಕಾಮಗಾರಿಗೆ ಬಳಸುವ ಸಾಮಗ್ರಿ ಕಳವು ಆರೋಪ: ಪ್ರಕರಣ ದಾಖಲು

Update: 2023-08-19 22:22 IST

ಮಂಗಳೂರು, ಆ.19: ನಗರದ ಎಂ.ಜಿ. ರಸ್ತೆಯ ಕಟ್ಟಡ ಕಾಮಗಾರಿಗೆ ಬಳಸಲು ಇರಿಸಿದ್ದ ಸಾಮಗ್ರಿಗಳನ್ನು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಕಳವು ಮಾಡಿರುವ ಬಗ್ಗೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಂಪಾರ್ ಕನ್‌ಸ್ಟ್ರಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಶೇಖರ್ ಎಂಬಾತ ಸುಮಾರು 19 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಈತನು ಕಂಪನಿಯ ವತಿಯಿಂದ ನಿರ್ಮಾಣ ಮಾಡುತ್ತಿರುವ ಎಂ.ಜಿ ರಸ್ತೆಯಲ್ಲಿರುವ ಜನತಾ ಕನ್‌ಸ್ಟ್ರಕ್ಷನ್ಸ್ ಮಾಲಕತ್ವದ ಕಾಮಗಾರಿಯ ಪ್ರೊ. ಜನರಲ್ ಮ್ಯಾನೆಜರ್ ಹಾಗೂ ಸೈಟ್ ಇನ್‌ಚಾರ್ಜ್ ಆಗಿದ್ದ ಎನ್ನಲಾಗಿದೆ.

ಕಾರಣಾಂತರಗಳಿಂದ ಕಾಮಗಾರಿಯು ಅರ್ಧಕ್ಕೆ ನಿಂತು ಹೋದ ಮೇಲೆ ಕಂಪನಿಗೆ ಸಂಬಂಧಿಸಿದ ಕಟ್ಟಡ ನಿರ್ಮಾಣದ ಸುಮಾರು 60 ಲಕ್ಷ ರೂ. ಮೌಲ್ಯದ ಸಾಮಾಗ್ರಿಗಳು ಅದೇ ಸೈಟಿನಲ್ಲಿದ್ದವು ಎನ್ನಲಾಗಿವೆ. ಈ ಸಾಮಗ್ರಿಗಳನ್ನು ಆರೋಪಿ ಶೇಖರ್ 2023ರ ಜನವರಿಯಲ್ಲಿ ಕಳವು ಮಾಡಿ ಕಂಪನಿಗೆ ನಷ್ಟವನ್ನುಂಟು ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News