×
Ad

ಅರಂತೋಡು ಗ್ರಾ.ಪಂ. ಅಧ್ಯಕ್ಷರಾಗಿ ಕೇಶವ ಅಡ್ತಲೆ, ಉಪಾಧ್ಯಕ್ಷೆಯಾಗಿ ಭವಾನಿ ಚಿಟ್ಟನ್ನೂರು

Update: 2023-08-10 22:09 IST

ಅರಂತೋಡು: ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಕೇಶವ ಅಡ್ತಲೆ ಆಯ್ಕೆಯಾಗಿದ್ದಾರೆ.‌ 

ತೀವ್ರ ಕುತೂಹಲ ಕೆರಳಿಸಿದ ಅರಂತೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತರ ಮಧ್ಯೆಯೇ ಚುನಾವಣೆ ನಡೆದು ಕೇಶವ ಅಡ್ತಲೆ ಅಧ್ಯಕ್ಷರಾಗಿ ಆಯ್ಕೆಯಾದರು. ಸುಳ್ಯ ಬಿಜೆಪಿ ಮಂಡಲ ಕೋಶಾಧಿಕಾರಿ ಶಿವಾನಂದ ಕುಕ್ಕುಂಬಳ ಅವರು ಪರಾಭವಗೊಂಡಿದ್ದಾರೆ. 15 ಸದಸ್ಯರ ಅಂತೋಡು ಗ್ರಾಮ ಪಂಚಾಯಿತಿಯಲ್ಲಿ 13 ಮಂದಿ ಬಿಜೆಪಿ ಬೆಂಬಲಿತ ಹಾಗೂ ಇಬ್ಬರು ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಚುನಾವಣೆಯಲ್ಲಿ ಕೇಶವ ಅಡ್ಡಲೆ ಅವರಿಗೆ 12 ಮತ ಹಾಗೂ ಶಿವಾನಂದ ಕುಕ್ಕುಂಬಳ ಅವರಿಗೆ 3 ಮತಗಳು ಬಂದವು. ಬಿಜೆಪಿ ಮಂಡಲ ಸಮಿತಿ ಅಧಿಕೃತ ಅಭ್ಯರ್ಥಿಯಾಗಿ ಕೇಶವ ಅಡ್ತಲೆ ಅಧ್ಯಕ್ಷೀಯ ಅಭ್ಯರ್ಥಿ ಎಂದು ಘೋಷಿಸಿದ್ದು ಶಿವಾನಂದ ಕುಕ್ಕುಂಬಳ ಅವರನ್ನು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಪಕ್ಷದ ಮುಖಂಡರು ಸೂಚಿಸಿದ್ದರು. ಆದರೆ ಶಿವಾನಂದ ಕುಕ್ಕುಂಬಳ ಅವರು ಸ್ಪರ್ಧೆಯಿಂದ ಹಿಂದೆ ಸರಿಯಲು ಮುಂದಾಗಲಿಲ್ಲ. ಈ ಹಿನ್ನಲೆಯಲ್ಲಿ ಚುನಾವಣೆ ನಡೆಯಿತು. ಹಿಂದುಳಿದ ವರ್ಗ ಎ ಮಹಿಳೆ ವಿಭಾಗಕ್ಕೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಭವಾನಿ ಚಿಟ್ಟನ್ನೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಶಿವಾನಂದ ಕುಕ್ಕುಂಬಳ ಅವರ ನಾಮಪತ್ರಕ್ಕೆ ಸದಸ್ಯ ಗಂಗಾಧರ ಬನ ಸೂಚಿಸಿದರು. ಅಧ್ಯಕ್ಷ ಅಭ್ಯರ್ಥಿ ಕೇಶವ ಅಡ್ತಲೆ ನಾಮಪತ್ರಕ್ಕೆ ವೆಂಕಟರಮಣ ಪೆತ್ತಾಜೆ ಸೂಚಕರಾಗಿದ್ದರು. ಉಪಾಧ್ಯಕ್ಷತೆಗೆ ಭವಾನಿ ನಾಮಪತ್ರಕ್ಕೆ ಮಾಲಿನಿ ಉಳುವಾರು ಸೂಚಕರಾಗಿದ್ದರು. ಶಿಕ್ಷಣ ಇಲಾಖೆಯ ಸೂಫಿ ಪೆರಾಜೆ ಚುನಾವಣಾಧಿಕಾರಿಯಾಗಿದ್ದಾರೆ ಪಿಡಿಓ ಜಯಪ್ರಕಾಶ್ ಸಹಾಯಕ ಚುನಾವಣಾಧಿಕಾರಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News