×
Ad

ದಾರುನ್ನೂರು: ʼಅಲ್ವಾನಿಕ್ʼ ಕಲಾ ಸಾಹಿತ್ಯ ಸ್ಪರ್ಧೆಯ ಸಮಾರೋಪ

Update: 2025-10-12 21:51 IST

ಕಾಶಿಪಟ್ಣ: ದಾರುನ್ನೂರು ಎಜುಕೇಶನ್ ಸೆಂಟರ್‌ನಲ್ಲಿ ವಿದ್ಯಾರ್ಥಿಗಳ 2k25 ಕಲಾ ಸಾಹಿತ್ಯ ಸ್ಪರ್ಧೆಯ ಸಮಾರೋಪವು ಇತ್ತೀಚೆಗೆ ನಡೆಯಿತು. ಗೌರವಾಧ್ಯಕ್ಷ, ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್‌ಅಝ್ಹರಿ ದುಆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಧ್ಯಕ್ಷ ಹಾಜಿ ಶರೀಫ್ ವೈಟ್‌ಸ್ಟೋನ್ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಕೋಶಾಧಿಕಾರಿ ಹಾಜಿ ಉಸ್ಮಾನ್ ಏರ್‌ಇಂಡಿಯಾ, ಪ್ರಾಂಶುಪಾಲ ಅಮೀನ್ ಹುದವಿ ಮಾತನಾಡಿದರು.

ಈ ಸಂದರ್ಭ ಕಲಾ ಸಾಹಿತ್ಯ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷರಾದ ಹಾಜಿ ಅಬ್ದುಲ್ ಸಮದ್, ಹಾಜಿ ಶಾಹುಲ್ ಹಮೀದ್ ಮೆಟ್ರೋ, ಜೊತೆ ಕಾರ್ಯದರ್ಶಿ ಅದ್ದು ಹಾಜಿ, ಲೆಕ್ಕ ಪರಿಶೋಧಕ ಅಹ್ಮದ್ ಅಬುಶಾಲಿ, ಸದಸ್ಯರಾದ ಹಾಜಿ ಎಂಜಿ ಮುಹಮ್ಮದ್, ಅಬೂಬಕ್ಕರ್ ಸಿದ್ದೀಕ್ ಮೆದರಬೆಟ್ಟು, ಇಮ್ರಾನ್ ಕುದ್ರೋಳಿ, ಇಕ್ಬಾಲ್ ಬಂಟ್ವಾಳ, ಹಾಜಿ ಹಸೈನಾರ್ ಬಂಡಾಡಿ, ಅಹ್ಮದ್ ಹುಸೇನ್, ಅಬೂಬಕ್ಕರ್ ಮರೋಡಿ, ಹಾಜಿ ಅಬ್ದುಲ್ ರಹಿಮಾನ್, ಎಫ್ ಅಬ್ದುಲ್ ಜಲೀಲ್, ಹಾಜಿ ಅಬ್ದುಲ್ ರಶೀದ್, ಸದರ್ ಮುದರ್ರಿಸ್ ಹುಸೇನ್ ರಹ್ಮಾನಿ, ಅಬ್ಬಾಸ್ ಮಂಗಳೂರು, ಉಪ ಪ್ರಾಂಶುಪಾಲ ರಶೀದ್ ಹುದವಿ, ಪಪೂ ಕಾಲೇಜು ಪ್ರಾಂಶುಪಾಲ ಅನ್ವರ್, ದಾರುನ್ನೂರ್ ಹಿತೈಷಿಗಳಾದ ಸಿಆರ್ ಅಬೂಬಕ್ಕರ್, ಇಬ್ರಾಹಿಂ ಮದೀನಾ, ಹಾಜಿ ರಫೀಕ್ ಕೆ.ಸಿ. ರೋಡ್, ಶಾಫಿ ಕಿರೋಡಿ, ಶಿಕ್ಷಕ-ರಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿ ನಝಿರ್ ಅಝರಿ, ಕೋಶಾಧಿಕಾರಿ ಹಾಜಿ ಇಬ್ರಾಹಿಂ ಕೋಡಿಜಾಲ್ ಮತ್ತಿತರರು ಉಪಸ್ಥಿತರಿದ್ದರು.

ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಫಕೀರಬ್ಬ ಮಾಸ್ಟರ್ ಸ್ವಾಗತಿಸಿದರು. ವ್ಯವಸ್ಥಾಪಕ ಅಬ್ದುಲ್ ಹಕೀಂ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News