×
Ad

ಇರಾ: ಬದ್ರಿಯಾ ಜುಮಾ ಮಸೀದಿಗೆ ಪದಾಧಿಕಾರಿಗಳ ಆಯ್ಕೆ

Update: 2025-10-11 18:22 IST

ಮೊಯ್ದಿನ್ ಕುಂಞಿ

ಬಾಳೆಪುಣಿ: ಉಳ್ಳಾಲ ತಾಲೂಕಿನ ಇರಾ ಗ್ರಾಮದ ಬದ್ರಿಯಾ ಜುಮಾ ಮಸೀದಿಯ ನೂತನ ಅಧ್ಯಕ್ಷರಾಗಿ ಮೊಯ್ದಿನ್ ಕುಂಞಿ ಹಾಜಿ ಪಾತಕಟ್ಟೆ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಮಸೀದಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಅಬ್ದುರ‌್ರಹ್ಮಾನ್ ಮದನಿ ಮೂಳೂರು ಅಧ್ಯಕ್ಷತೆಯಲ್ಲಿ ನಡೆದ ಸಬೆಯಲ್ಲಿ ಮುದರ್ರಿಸ್ ಅಲಿ ಫೈಝಿ ದುಆಗೈದರು.

ಉಪಾಧ್ಯಕ್ಷರಾಗಿ ಬಿ.ಎಸ್. ಮುಹಮ್ಮದ್ ಹಾಜಿ ಮತ್ತು ಎಚ್. ಉಮ್ಮರ್, ಪ್ರಧಾನ ಕಾರ್ಯದರ್ಶಿಯಾಗಿ ಉಮ್ಮರ್ ಬಿ.ಎಂ., ಜೊತೆ ಕಾರ್ಯದರ್ಶಿಗಳಾಗಿ ಉಮ್ಮರ್ ಸಿ.ಎಚ್., ಇಕ್ಬಾಲ್ ಸಿ.ಎಂ., ರಫೀಕ್ ಬಿ.ಎನ್. ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಬ್ದುರ‌್ರಹ್ಮಾನ್ ಮದನಿ, ಸಿ.ಎಚ್. ಮುಹಮ್ಮದ್, ಉಮ್ಮರ್ ಹಾಜಿ, ಅಬೂಬಕ್ಕರ್ ಪಿ.ಕೆ., ಅಬೂಬಕ್ಕರ್ ಸಂಕ, ಬಿ.ಪಿ. ಮೊಯ್ದಿನ್, ಮೊಯ್ದಿನ್ ಬಿ.ಎನ್, ಹಸೈನಾರ್ ಬಡದಲ, ಮುಹಮ್ಮದ್ ಟಿಪ್ಪು, ಮೋನು ಹಾಜಿ ತಟಾರಬಲ್ಪು, ಇಬ್ರಾಹಿಂ ಬಿ.ಕೆ. ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News