×
Ad

ಬಂಟ್ವಾಳ | ಪೆಂಡಾಲ್ ಹಾಕುತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಓರ್ವ ಮೃತ್ಯು ; ನಾಲ್ವರಿಗೆ ಗಾಯ

Update: 2024-07-20 15:42 IST

ಬಂಟ್ವಾಳ : ಖಾಸಗಿ ಸ್ಥಳವೊಂದರಲ್ಲಿ ಪೆಂಡಾಲ್ ಹಾಕುತಿದ್ದ ವೇಳೆ ಕಬ್ಬಿಣದ ರಾಡ್ ವಿದ್ಯುತ್ ತಂತಿಗೆ ಸ್ಪರ್ಶಿಸಿ ಬಿಹಾರ ಮೂಲದ ಯುವಕನೋರ್ವ ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ಕಡೇಶ್ವಾಲ್ಯ ಗ್ರಾಮದ ಕಾಡಬೆಟ್ಟು ಎಂಬಲ್ಲಿ ಶನಿವಾರ ಮದ್ಯಾಹ್ನ ನಡೆದಿದೆ.

ಬಿಹಾರ ಮೂಲದ ಕುಂದನ್ ಕುಮಾರ್ ಮಂಡಲ್ (18) ಎಂಬಾತ ಮೃತಪಟ್ಟಿದ್ದು, ಕಡೇಶ್ವಾಲ್ಯ ಗ್ರಾಮದ ಪ್ರಸನ್ನ , ಜಾರ್ಖಂಡ್ ಮೂಲದ ಬಬ್ಲು, ಪ್ರದೀಪ್, ಪಶ್ಚಿಮ ಬಂಗಾಳದ ರೋಹಿತ್ ಎಂಬವರು ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕಡೇಶ್ವಾಲ್ಯ ಗ್ರಾಮದ ಕಾಡಬೆಟ್ಟು ಎಂಬಲ್ಲಿ ಕೋಳಿ ಅಂಕ ನಡೆಸುವ ಉದ್ದೇಶದಿಂದ ಪೆಂಡಾಲ್ ಹಾಕುತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಮೃತದೇಹವನ್ನು ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಠಾಣಾ ನಿರೀಕ್ಷಕ ಶಿವಕುಮಾರ್, ಠಾಣಾಧಿಕಾರಿ ಹರೀಶ್, ಗ್ರಾಮ ಕರಣಿಕ ಕರಿಬಸಪ್ಪ ಸ್ಥಳಕ್ಕೆ ಬೇಟಿ ನೀಡಿ, ಮಹಜರು ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News