ಬೊಂಡಂತಿಲ: ಮೆಸ್ಕಾಂ ವಿರುದ್ಧ ಡಿವೈಎಫ್‌ಐ ಪ್ರತಿಭಟನೆ
ಮಂಗಳೂರು: ಬೊಂಡಂತಿಲ, ನೀರುಮಾರ್ಗ ಗ್ರಾಮಗಳ ವಿದ್ಯುತ್ ನಿರ್ವಹಣೆ ವೈಫಲ್ಯದ ವಿರುದ್ಧ ಡಿವೈಎಫ್‌ಐ ವಾಮಂಜೂರು ಪ್ರದೇಶ ಸಮಿತಿಯ ವತಿಯಿಂದ ಸೋಮವಾರ ವಾಮಂಜೂರು ಮೆಸ್ಕಾಂ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಡಿವೈಎಫ್‌ಐ ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರು ಮಾತನಾಡಿ ಬೊಂಡಂತಿಲ ಮತ್ತು ನೀರುಮಾರ್ಗ ಗ್ರಾಮ ಗಳು ವಿದ್ಯುತ್ ಸಮಸ್ಯೆಗಳ ಆಗರವಾಗಿದೆ. ಈ ಎರಡು ಗ್ರಾಮಗಳಲ್ಲಿ ಎಪ್ರಿಲ್‌ನಿಂದ ವಿದ್ಯುತ್ ಕಡಿತ ಹೆಚ್ಚಾಗಿದೆ. ಇದಕ್ಕೆ ಈ ಪ್ರದೇಶದ ವಿದ್ಯುತ್ ನಿರ್ವಹಣೆಯ ವೈಫಲ್ಯ ಕಾರಣವಾಗಿದೆ. ಬೊಂಡಂತಿಲ, ನೀರುಮಾರ್ಗ ಗ್ರಾಮಕ್ಕೆ ಮೆಸ್ಕಾಂ ಉಪ ಕಚೇರಿ ಸ್ಥಾಪಿಸಬೇಕು ಎಂದರು.
ವಾಮಂಜೂರು ಉಪಕಚೇರಿಯ ಸಹಾಯಕ ಅಭಿಯಂತರ ಡೆನ್ನಿಸ್ ಡಿಸೋಜ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್‌ಐ ವಾಮಂಜೂರು ಪ್ರದೇಶ ಸಮಿತಿಯ ಅಧ್ಯಕ್ಷ ದಿನೇಶ್ ಬೊಂಡಂತಿಲ, ಕಾರ್ಯದರ್ಶಿ ಚಂದ್ರಹಾಸ ಕಲ್ಲುಡೇಲು, ಕಾರ್ಮಿಕ ಮುಖಂಡರಾದ ಕೆ. ಗಂಗಯ್ಯ ಅಮೀನ್, ಬಾಬು ಅಣೆಬದಿ, ಗೋಪಾಲ ಮೂಲ್ಯ, ರೈತ ಮುಖಂಡರಾದ ಬಾಬು ಸಾಲ್ಯಾನ್, ವೆಂಕಪ್ಪಪೂಜಾರಿ, ಬೋಜ ಪೂಜಾರಿ ದೇವಸ, ಯುವಜನ ಮುಖಂಡರಾದ ಮಹೇಶ್ ಬೊಂಡಂತಿಲ, ಕೀರ್ತನ್ ಸಂಕೇಶ ಬೆಟ್ಟು, ಪ್ರವೀಣ್ ಕುಮಾರ್ ಮಜಲ್, ರಾಧಾಕೃಷ್ಣ ಕಟಿಂಜ ಉಪಸ್ಥಿತರಿದ್ದರು.