ಉಪ್ಪಿನಂಗಡಿ: ಅಂಗಡಿಗೆ ನುಗ್ಗಿ ವ್ಯಕ್ತಿಗೆ ಹಲ್ಲೆ; ಪ್ರಕರಣ ದಾಖಲು
Update: 2023-10-06 22:34 IST
ಉಪ್ಪಿನಂಗಡಿ: ವ್ಯಕ್ತಿಯೋರ್ವರು ಏಕಾಏಕಿ ಅಂಗಡಿಗೆ ನುಗ್ಗಿ ಅಂಗಡಿ ಮಾಲಕನಿಗೆ ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿಯ ಪೆರಿಯಡ್ಕದಲ್ಲಿ ನಡೆದಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ಬಿ.ಕೆ. ಅಬ್ದುರ್ರಹ್ಮಾನ್ ಎಂಬವರು ಪೆರಿಯಡ್ಕದಲ್ಲಿ ಜನರಲ್ ಸ್ಟೋರ್ ಹೊಂದಿದ್ದು, ಅ.5ರಂದು ಸಂಜೆ ಆರೋಪಿ ಝಕಾರಿಯಾ ಎಂಬಾತ ಅಂಗಡಿಗೆ ನುಗ್ಗಿ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭ ಇತರ ಆರೋಪಿಗಳಾದ ಹಮೀದ್, ರಫೀಕ್, ಅನ್ಸಾಫ್ ಎಂಬವರು ಮರದ ದೊಣ್ಣೆಗಳೊಂದಿಗೆ ಬಂದಾಗ ಸಾರ್ವಜನಿಕರು ಅವರನ್ನು ತಡೆದಿದ್ದಾರೆ. ಎಲ್ಲಾ ಆರೋಪಿಗಳು ನನಗೆ ಜೀವ ಬೆದರಿಕೆ ಹಾಕಿ ತೆರಳಿದ್ದಾರೆ ಎಂದು ಅಬ್ದುರ್ರಹ್ಮಾನ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.