ಸಿಎ ಪರೀಕ್ಷೆ | ಜಾಯಿಸ್ಟನ್ ಡಿಸೋಜ , ಫಾತಿಮಾ ಝನೀಬಾ ತೇರ್ಗಡೆ
ಮಂಗಳೂರು : ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) 2025 ಸೆಪ್ಟೆಂಬರ್‌ನಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಮಂಗಳೂರಿನ ಜಾಯಿಸ್ಟನ್ ಡಿ ಸೋಜ ಮತ್ತು ಫಾತಿಮಾ ಝನೀಬಾ ತೇರ್ಗಡೆಯಾಗಿದ್ದಾರೆ.
ನಗರದ ಬಿಜೈನ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ವಿದ್ಯಾಭ್ಯಾಸ ಆರಂಭಿಸಿದ ಜಾಯಿಸ್ಟನ್ ಡಿ ಸೋಜ ಬಳಿಕ ಸಂತ ಅಲೋಶಿಯಸ್ ಕಾಲೇಜಿನಿಂದ ಪದವಿ ಪಡೆದು ನಗರದ ಉರ್ವಸ್ಟೋರ್, ಲೆಕ್ಕಪರಿಶೋಧಕ ಸಿಎ ಪ್ರಸನ್ನ ಶೆಣೈ ಅವರ ಮಾರ್ಗದರ್ಶನದಲ್ಲಿ ಪರೀಕ್ಷೆ ಎದುರಿಸಿದ್ದರು. ಇವರು ಉಡುಪಿ ಕೋಳಲಗಿರಿ, ದಿವಂಗತ ಜಾನ್ ಡಿ ಸೋಜ ಮತ್ತು ಫ್ಲೇವಿಯಾ ಡಿ ಸೋಜ ಅವರ ಪುತ್ರ.
ಫಾತಿಮಾ ಝನೀಬಾ ಅವರು ಮಂಗಳೂರು ಯೆನೆಪೊಯ ಶಾಯಲ್ಲಿ ವಿದ್ಯಾಭ್ಯಾಸ ಪಡೆದ ಬಳಿಕ ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜು ಪದವಿ ಪಡೆದ ಬಳಿಕ ನಗರದ ಉರ್ವಸ್ಟೋರ್‌ನ ಲೆಕ್ಕಪರಿಶೋಧಕರಾದ ಸಿಎ ಪ್ರಸನ್ನ ಶೆಣೈ ಅವರ ಮಾರ್ಗದರ್ಶನದಲ್ಲಿ ಪರೀಕ್ಷೆ ಎದುರಿಸಿದ್ದರು. ಇವರು ಫಳ್ನೀರ್‌ನ ಮಹಮೂದ್ ಟಿ.ವಿ ಮತ್ತು ರಮ್ಲತ್ ಮಹಮೂದ್ ಅವರ ಪುತ್ರಿ.