×
Ad

ಗಾಂಧಿ, ಅಂಬೇಡ್ಕರ್ ದೂರದೃಷ್ಟಿಯೇ ಕಾಂಗ್ರೆಸ್ ಕಾರ್ಯಕ್ರಮ: ವಿನಯ್ ಕುಮಾರ್ ಸೊರಕೆ

Update: 2025-08-19 18:34 IST

ಕಾಪು : ದೇಶದಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರ ಭಾರತದ ಜನ ಸಾಮಾನ್ಯರ ಸ್ವಾಭಿಮಾನದ ಬದುಕಿನ ಹಕ್ಕಿಗಾಗಿ ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್ ರವರ ದೂರದೃಷ್ಟಿಯೊಂದಿಗೆ ಕಾರ್ಯಕ್ರಮ ರೂಪಿಸಿರು ವುದು ಕಾಂಗ್ರೆಸ್ ಸರಕಾರ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷರಾದ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಹೇಳಿದರು.

ಅವರು ಕಾಪು ಬ್ಲಾಕ್ ಕಾಂಗ್ರೆಸ್ (ದಕ್ಷಿಣ) ವತಿಯಿಂದ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಆತಿಥ್ಯದಲ್ಲಿ ಪಡುಬಿದ್ರಿ ಸಹಕಾರಿ ಸಂಗಮದಲ್ಲಿ ನಡೆದ ಜೈ ಬಾಪು, ಜೈ ಬೀಮ್, ಜೈ ಸಂವಿಧಾನ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದರು.

ವಿವಿಧತೆಯಲ್ಲಿ ಏಕತೆ, ಏಕತೆಯಲ್ಲಿ ಅನೇಕತೆ ಎಂಬ ವೈವಿಧ್ಯಮಯ ಪರಂಪರೆ - ಸಂಸ್ಕೃತಿ ಇರುವ ಭಾರತದಂತಹ ಜಾತ್ಯತೀತ ರಾಷ್ಟ್ರದಲ್ಲಿ ವಿವಿಧ ಧರ್ಮ, ಜಾತಿ, ಭಾಷೆ ಮತ್ತು ವರ್ಣದ ಜನರು ಸೌಹಾರ್ದತೆಯಿಂದ ಬಾಳುವಂತಹ ಅಧಿಕಾರವನ್ನು ಕಲ್ಪಿಸಿರುವುದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್‍ರವರ ನೇತೃತ್ವದಲ್ಲಿ ಭಾರತದ ಸಂವಿಧಾನ ರಚಿಸಲಾಗಿದೆ ಎಂದ ಅವರು, ಸಂವಿಧಾನದ ಪೀಠಕೆಯಲ್ಲಿರುವ ಸಂವಿಧಾನದ ಮೂಲ ತತ್ವಗಳಾಗಿರುವ 'ಜಾತ್ಯತೀತತೆ' ಮತ್ತು 'ಸಾಮಾಜಿಕ ನ್ಯಾಯ' ಎಂಬ ಪದಗಳನ್ನು ಅಳಿಸಬೇಕೆಂಬ ಕೂಗನ್ನೆಬ್ಬಿಸಿರುವ ಆರ್‍ಎಸ್‍ಎಸ್ ಮತ್ತು ಬಿಜೆಪಿಯ ನಡೆ ಖಂಡನಾರ್ಹ ಎಂದರು.

ವಿಧಾನ ಪರಿಷತ್ ಸದಸ್ಯರಾದ ಸಲೀಮ್ ಅಹ್ಮದ್ ಮಾತನಾಡಿ, ಮಹಾತ್ಮಾ ಗಾಂಧೀಜಿ ಮತ್ತು ಅಂಬೇಡ್ಕರ್‍ರವರು ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ಸ್ವಾತಂತ್ರ್ಯ ನಂತರ ದೇಶಕ್ಕಾಗಿ ಮಾಡಿದ ತ್ಯಾಗ ಹಾಗೂ ಕೊಡುಗೆಗಳ ಬಗ್ಗೆ ವಿವರಿಸಿದರು.

ಕೆಪಿಪಿಸಿ ವಕ್ತಾರ ಸುಧೀರ್ ಮುರೊಳ್ಳಿ ಮಾತನಾಡಿ, ನಾಗ್ಪುರದ ಅರ್‍ಎಸ್‍ಎಸ್ ಕಚೇರಿಯ ಎಡಗಡೆಯಲ್ಲಿ ಗಾಂಧಿ ಅಶ್ರಮ ಪಾರ್ಕ್, ಬಲಭಾಗದಲ್ಲಿ ಅಂಬೇಡ್ಕರ್ ದೀಕ್ಷಾ ಭೂಮಿ ಇದೆ. ಈ ಎರಡು ಭಾರತದ ಜಾತ್ಯತೀತ ಶಕ್ತಿಗಳು ಅರ್‍ಎಸ್‍ಎಸ್‍ನ ಸುಳ್ಳುಗಳಿಗೆ ಮತ್ತು ಅಪಪ್ರಚಾರಕ್ಕೆ ತಡೆಯೊಡ್ಡುವ ಮೂಲಕ ಸತ್ಯ ದರ್ಶನವನ್ನು ದೇಶಕ್ಕೆ ತೋರಿಸುತ್ತಿದೆ ಎಂದರು.

ಕೆಪಿಸಿಸಿ ವಕ್ತಾರ ಮುನೀರ್ ಜನ್ಸಾಲೆ ಮತ್ತು ಕೆಪಿಸಿಸಿ ಸಂಯೋಜಕ ನವೀನಚಂದ್ರ ಜೆ ಶೆಟ್ಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಾಪು ಬ್ಲಾಕ್ ಕಾಂಗ್ರೆಸ್ (ದಕ್ಷಿಣ) ಅಧ್ಯಕ್ಷ ವೈ. ಸುಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಪಕ್ಷದ ಪ್ರಮುಖರಾದ ನವೀನ್‍ಚಂದ್ರ ಸುವರ್ಣ, ಕಾಪು ದಿವಾಕರ್ ಶೆಟ್ಟಿ, ಗೀತಾ ವಾಗ್ಲೆ, ಅನಿತಾ ಡಿಸೋಜ ಬೆಳ್ಮಣ್, ಕರುಣಾಕರ್ ಪೂಜಾರಿ, ಶರ್ಫುದ್ದಿನ್ ಶೇಖ್, ಮೊಹಮ್ಮದ್ ನಿಯಾಜ್, ವೈ.ಸುಧೀರ್ ಕುಮಾರ್, ಜಿತೇಂದ್ರ ಫುರ್ಟಾಡೋ, ಅಬ್ದುಲ್ ಅಜೀಜ್ ಹೆಜ್ಮಾಡಿ, ಶಾಂತಲಾತ ಶೆಟ್ಟಿ, ನವೀನ್ ಎನ್. ಶೆಟ್ಟಿ, ಕಿರಣ್ ಹೆಗ್ಡೆ, ಕಿಶೋರ್ ಕುಮಾರ್ ಎರ್ಮಾಳ್, ಶೇಖರ್ ಹೆಜ್ಮಾಡಿ, ಯಶವಂತ್ ಪಲಿಮಾರು ಮತ್ತು ವಿವಿಧ ಸಮಿತಿ / ಘಟಕ ಗಳ ಅಧ್ಯಕ್ಷರು / ಪದಾಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ವೈ. ಸುಕುಮಾರ್ ಸ್ವಾಗತಿಸಿದರು. ಸಂತೋಷ್ ಪಡುಬಿದ್ರಿ ವಂದಿಸಿದರು. ರಾಜೇಶ್ ಶೇರಿಗಾರ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News