ಧರ್ಮಸ್ಥಳ: 11 ನೇ ಜಾಗದಿಂದ ಎಸ್‌ಐಟಿ ತಂಡವನ್ನು ಕಾಡಿನ ಪ್ರದೇಶಕ್ಕೆ ಕರೆದೊಯ್ದ ದೂರುದಾರ
Update: 2025-08-04 12:39 IST
ಧರ್ಮಸ್ಥಳ: 11 ನೇ ಸ್ಥಳದಲ್ಲಿ ಅಗೆಯುವ ಕಾರ್ಯ ಆರಂಭವಾಗುವ ಸಂದರ್ಭದಲ್ಲಿ ದೂರುದಾರ ಅನಾಮಿಕ ವ್ಯಕ್ತಿ ಕಾರ್ಯಾಚರಣೆ ನಡೆಸುತ್ತಿರುವ ತಂಡವನ್ನು ಗುರುತಿಸಿದ ಸ್ಥಾನದಿಂದ ಮೇಲ್ಭಾಗಕ್ಕೆ ಕರೆದೊಯ್ದಿದ್ದಾನೆ .ಇದು ಹಲವಾರು ಕುತೂಹಲಕ್ಕೆ ಕಾರಣವಾಗಿದೆ.
ಆತ ಗುರುತಿಸಿದ 11ನೇ ಸ್ಥಳದಲ್ಲಿ ಇನ್ನೂ ಅಗೆಯುವ ಕಾರ್ಯ ನಡೆದಿಲ್ಲ.
ಈ ಪ್ರದೇಶಲ್ಲಿ ದಟ್ಟವಾದ ಕಾಡಿದ್ದು, ಈ ಕಾಡಿನ ಪ್ರದೇಶದಲ್ಲಿ ಏನಿದೆ ಎಂಬುದು ಕುತೂಹಲದ ವಿಚಾರವಾಗಿದೆ.
ಈತ ಹೊಸ ಸ್ಥಳಗಳನ್ನು ಗುರುತಿಸಿದ್ದಾನೆಯೇ ಅಥವಾ ಬೇರೇನಾದರೂ ವಿಚಾರವಿದೆಯೇ? ಈಗ ಯಾವ ಸ್ಥಳವನ್ನು ಅಗೆಯಬೇಕು ಎಂಬ ಬಗ್ಗೆ ಅಧಿಕಾರಿಗಳು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ.
ಹತ್ತು ಸ್ಥಳವನ್ನು ಅಗೆದರೂ ಕೇವಲ ಒಂದು ಸ್ಥಳದಲ್ಲಿ ಮಾತ್ರ ಅಸ್ತಿಪಂಜರ ಸಿಕ್ಕಿತ್ತು. ಈ ಹಿನ್ನಲೆಯಲ್ಲಿ ಆತ ಹೆಚ್ಚಿನ ಸ್ಥಳಗಳನ್ನು ಗುರುತಿಸುತ್ತಿದ್ದಾನೆಯೇ ಎಂಬ ಅನುಮಾವಿದೆ