ಒಲವಿನ ಹಳ್ಳಿ ಆಶ್ರಮವಾಸಿಗಳಿಗೆ ಹಣ್ಣುಹಂಪಲು ವಿತರಣೆ
Update: 2025-07-22 18:35 IST
ದೇರಳಕಟ್ಟೆ, ಜು.22: ಕಿನ್ಯ ಕುತುಬಿಯ್ಯಾ ಹಳೆ ವಿದ್ಯಾರ್ಥಿ ಕಮಿಟಿಯ ಸುವರ್ಣ ಮಹೋತ್ಸವ ಅಂಗವಾಗಿ ಒಲವಿನ ಹಳ್ಳಿ ಪುನರ್ವಸತಿ ಕೇಂದ್ರಕ್ಕೆ ತೆರಳಿ ಆಶ್ರಮವಾಸಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಸುವರ್ಣ ಮಹೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷ ಮುಹಮ್ಮದ್ ರಹ್ಮತ್‌ನಗರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ಅಶ್ರಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಜಲೀಲ್ ಚಾಕಟ್ಟೆ ಪಡ್ಪು, ಕಿನ್ಯ ಕೇಂದ್ರ ಜಮಾಅತ್ ಅಧ್ಯಕ್ಷ ಅಬೂಸಾಲಿ ಹಾಜಿ ಮಾತನಾಡಿದರು.
ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಫಾರೂಕ್ ಕಿನ್ಯ ಸ್ವಾಗತಿಸಿದರು. ಒಲವಿನಹಳ್ಳಿ ಪುನರ್ವಸತಿ ಮುಖ್ಯಸ್ಥೆ ಐಲನ್ ಮಥಾಯಿಸ್ ಕಮಿಟಿಯ ಕಾರ್ಯವನ್ನು ಪ್ರಶಂಸಿಸಿದರು.
ಜೊತೆ ಕಾರ್ಯದರ್ಶಿ ನಝೀರ್ ಸಿ.ವಿ., ಸದಸ್ಯರಾದ ಟಿ.ಎಂ. ಮುಹಮ್ಮದ್, ಅಬ್ದುಲ್ ಅಝೀಝ್, ಇಬ್ರಾಹಿಂ ಸಾಗ್, ಮೊಯಿದಿನ್ ಎಂ.ಎನ್., ಹನೀಫ್ ಬಹರೈನ್, ಖಲೀಲ್‌ಸಾಗ್, ಝಕರಿಯ, ಇರ್ಷಾದ್, ಇಲ್ಯಾಸ್ ಉಪಸ್ಥಿತರಿದ್ದರು.