×
Ad

ದ.ಕ. ಬಾರ್ ಅಸೋಸಿಯೇಶನ್ ರದ್ದು : ಆಕ್ಷೇಪಣೆ ಆಹ್ವಾನ

Update: 2026-01-20 22:46 IST

ಸಾಂದರ್ಭಿಕ ಚಿತ್ರ

ಮಂಗಳೂರು: ನಗರದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿರುವ ದ.ಕ.ಡಿಸ್ಟ್ರಿಕ್ಟ್ ಬಾರ್ ಅಸೋಸಿಯೇಶನ್ 1986ರ ಡಿ.3ರಂದು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರಡಿ ನೊಂದಣಿಗೊಂಡಿದೆ. ಆದರೆ ಇದರ ವಾರ್ಷಿಕ ಫೈಲಿಂಗ್ ಮಾಡದೆ 38 ವರ್ಷಗಳು ಕಳೆದಿದ್ದುದರಿಂದ ಸಂಘದ ಅಸ್ತಿತ್ವ ಇಲ್ಲವೆಂದು ಪರಿಗಣಿಸಿ ಇದರ ನೋಂದಣಿಯನ್ನು ರದ್ದುಗೊಳಿಸಬೇಕಾಗಿದೆ.

ಈ ಸಂಬಂಧ ದ.ಕ. ಡಿಸ್ಟ್ರಿಕ್ಟ್ ಬಾರ್ ಅಸೋಸಿಯೇಶನ್‌ನ ನೋಂದಾಯಿತ ಸದಸ್ಯರು ಆಕ್ಷೇಪಣೆಗಳು ಇದ್ದಲ್ಲಿ ಈ ಪ್ರಕಟನೆಯ ದಿನಾಂಕದಿಂದ 7 ದಿನಗಳೊಳಗೆ ಜಿಲ್ಲಾ ಸಂಘಗಳ ನೋಂದಣಿ ಕಚೇರಿಗೆ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ಯಾವುದೇ ಆಕ್ಷೇಪಣೆಗಳು ಇಲ್ಲವೆಂದು ಭಾವಿಸಿ ಇದರ ನೋಂದಣಿಯನ್ನು ರದ್ದುಗೊಳಿಸಲಾಗುವುದು ಎಂದು ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘ-ಸಂಸ್ಥೆಗಳ ನೋಂದಣಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News