×
Ad

ದ.ಕ ಜಿಲ್ಲೆ | ಸೆಪ್ಟೆಂಬರ್ ಮೊದಲ ವಾರದಿಂದ ಶಾಲೆಗಳಿಗೆ ಶನಿವಾರ ಇಡೀ ದಿನ ತರಗತಿ; ಶಿಕ್ಷಣ ಇಲಾಖೆ ಸೂಚನೆ

Update: 2023-08-30 12:32 IST

ಸಾಂದರ್ಭಿಕ ಚಿತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಪ್ಟೆಂಬರ್ ಮೊದಲ ವಾರದಿಂದ ಆರಂಭಿಸಿ ಒಟ್ಟು 14 ಶನಿವಾರಗಳಂದು ಇಡೀ ದಿನ ಶಾಲೆ ನಡೆಸುವಂತೆ ದ.ಕ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಎಲ್ಲಾ ಶಾಲೆಗಳಿಗೆ ಸೂಚನೆ ನೀಡಿದ್ದಾರೆ.

ಜುಲೈ ತಿಂಗಳಲ್ಲಿ ಸುರಿದ ಅತೀ ಹೆಚ್ಚು ಮಳೆಯಿಂದಾಗಿ ದ.ಕ ಜಿಲ್ಲೆಯ ಶಾಲೆಗಳಿಗೆ ದ.ಕ ಜಿಲ್ಲಾಧಿಕಾರಿಯವರ ನಿರ್ದೇಶನದಂತೆ 7 ದಿನ ರಜೆ ಸಾರಲಾಗಿತ್ತು. ಈ ರಜಾ ದಿನಗಳಿಂದ ವಿದ್ಯಾರ್ಥಿಗಳಿಗೆ ಆದ ತರಗತಿ ನಷ್ಟವನ್ನು ಭರ್ತಿ ಮಾಡಲು 14 ಶನಿವಾರಗಳಂದು ಇಡೀ ದಿನ ತರಗತಿ ನಡೆಸಲು ನಿರ್ಧರಿಸಲಾಗಿದೆ ಎಂದು ಉಪನಿರ್ದೇಶಕರು ತಿಳಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News