ಡಾ.ನಿಸಾರ್ ಅಹ್ಮದ್ ದಾರುನ್ನೂರ್ ಭೇಟಿ, ಸನ್ಮಾನ ಕಾರ್ಯಕ್ರಮ
ಮಂಗಳೂರು : ಬೆಂಗಳೂರು ಸಿಟಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಪಡೆದ ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕುಲಪತಿ ಹಾಗೂ ದಾರುನ್ನೂರ್ ಕೇಂದ್ರ ಸಮಿತಿಯ ನಿರ್ದೇಶಕ ರಾದ ಡಾ.ನಿಸಾರ್ ಅಹ್ಮದ್ ಇವರನ್ನು ದಾರುನ್ನೂರ್ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಬಹ್ರುನ್ನೂರ್ ಜುಮಾ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾರುನ್ನೂರ್ ಕೇಂದ್ರ ಸಮಿತಿಯ ಅಧ್ಯಕ್ಷರಾದ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಿ ಸಂಸ್ಥೆಯ ಹಿತೈಷಿಗಳ ಕೊಡುಗೆಗಳ ಮೂಲಕ ಸಂಸ್ಥೆಯು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ಗೌರವಾಧ್ಯಕ್ಷರಾದ ವೈಟ್ ಸ್ಟೋನ್ ಷರೀಫ್ ಹಾಜಿ, ಲಿಟ್ಲ್ ಫ್ಲವರ್ ಪಬ್ಳಿಕ್ ಸ್ಕೂಲ್ ಮತ್ತು ಮಿತ್ರಾ ಅಕಾಡೆಮಿ ಸಂಸ್ಥೆ ಬೆಂಗಳೂರು ಇದರ ಚೇರ್ಮನ್ ಇಕ್ಬಾಲ್ ಅಹ್ಮದ್, ಉದ್ಯಮಿ ಝಫರುಲ್ಲಾಹ ಒಡೆಯರ್ ಭಾಗವಹಿಸಿದ್ದರು.
ಗೌರವಾರ್ಪಣೆಯನ್ನು ಸ್ವೀಕರಿಸಿ ಡಾ.ನಿಸಾರ್ ಅಹ್ಮದ್ ಧನ್ಯವಾದವನ್ನು ಸೂಚಿಸಿ ಸಂಸ್ಥೆಯ ಅಭಿವೃದ್ಧಿಯ ಹಾದಿಯಲ್ಲಿ ಜೊತೆಗಿರುವೆನು ಎಂದು ಭರವಸೆ ನೀಡಿದರು.ಸಂಸ್ಥೆಯ ವಿದ್ಯಾರ್ಥಿಗಳಾದ ಶೈಬಾನ್ ಮತ್ತು ಶಂಷೀರ್ ಸಂಸ್ಥೆಯ ಬಗ್ಗೆ ಕಿರು ವಿವರಣೆಯನ್ನು ನೀಡಿದರು.
ಸಮಾರಂಭದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಹಾಸ್ಕೋ ಅಬ್ದುಲ್ ರಹಿಮಾನ್, ಶಾಹುಲ್ ಹಮೀದ್ ಮೆಟ್ರೋ ಹಾಜಿ, ಹಾಜಿ,ಮೊಹಮ್ಮದ್ ಬಪ್ಪಳಿಗೆ, ಅದ್ದು ಹಾಜಿ,ಎಂ ಜಿ ಮೊಹಮ್ಮದ್ ಹಾಜಿ,ಹನೀಫ್ ಹಾಜಿ, ಅಹ್ಮದ್ ಹುಸೇನ್, ಹಾರಿಷ್ ಹಾಜಿ, ಶಾಲಿ ತಂಳ್ , ಝೀನ್ ಹೊಸಮನೆ, ಎಫ್ ಎ ಅಬ್ದುಲ್ ಜಲೀಲ್, ಜಿಲ್ಲಾ ವಕ್ಫ್ ಬೋರ್ಡು ಉಪಾಧ್ಯಕ್ಷ ರಾದ ಫಕೀರಬ್ಬ ಮಾಸ್ಟರ್, ದಕ್ಷಿಣ ಕನ್ನಡ ಜಿಲ್ಲಾ ಮದರಸ ಮೆನೇಜ್ಮೆಂಟ್ ಅಧ್ಯಕ್ಷರಾದ ಎಂ ಎಚ್ ಮೊಯ್ದೀನ್ ಹಾಜಿ, ಪ್ರಾಂಶುಪಾಲರಾದ ಅಮೀನ್ ಹುದವಿ, ಮುದರಿಸ್ ಹುಸೇನ್ ರಹ್ಮಾನಿ, ವ್ಯವಸ್ಥಾಪಕ ಅಬ್ದುಲ್ ಹಕೀಮ್, ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.
ಸಂಸ್ಥೆಯ ಕೋಶಾಧಿಕಾರಿ ಹಾಜಿ ಉಸ್ಮಾನ್ ಏರ್ ಇಂಡಿಯಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಉಪಾಧ್ಯಕ್ಷ ಕೋಡಿಜಾಲ್ ಇಬ್ರಾಹಿಂ ಹಾಜಿ ಮುನ್ನುಡಿಯನ್ನು ನೀಡಿದರು. ಪ್ರಧಾನ ಕಾರ್ಯದರ್ಶಿ ಸಮದ್ ಹಾಜಿ ವಂದಿಸಿದರು.