×
Ad

ವಿದ್ಯುತ್ ಆಘಾತ : ಕಾರ್ಮಿಕ ಮೃತ್ಯು

Update: 2023-11-01 23:12 IST

ಮಂಗಳೂರು, ನ.1: ವಿದ್ಯುತ್ ಶಾಕ್ ತಗಲಿ ಶಾಮಿಯಾನ ಅಂಗಡಿಯ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಮೂಡುಶೆಡ್ಡೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.

ಮಧ್ಯಪ್ರದೇಶದ ಸೋನುಸಿಂಗ್ ಗೋಂಡಾ(22) ಮೃತಪಟ್ಟ ಕಾರ್ಮಿಕ. ಮೂಡುಶೆಡ್ಡೆ ಗ್ರಾ.ಪಂ. ಕಚೇರಿ ಬಳಿ ಇರುವ ಶಾಮಿಯಾನ ಅಂಗಡಿಯಲ್ಲಿ ಕಳೆದ 5 ತಿಂಗಳಿನಿಂದ ಸೋನುಸಿಂಗ್ ಕೆಲಸ ಮಾಡಿಕೊಂಡಿದ್ದರು. ಅಂಗಡಿಯ ಕೊಠಡಿಯಲ್ಲಿಯೇ ತಂಗಿದ್ದರು.

ಮಂಗಳವಾರ ರಾತ್ರಿ 7 ಗಂಟೆಗೆ ಶಾಮಿಯಾನ ಅಂಗಡಿಗೆ ಬಂದು ರಾತ್ರಿ 7.45ರ ಸುಮಾರಿಗೆ ಊಟ ಸಿದ್ಧಪಡಿಸಲೆಂದು ಅಂಗಡಿಯ ಸಿಮೆಂಟ್ ಶೀಟ್‌ಗೆ ಅಳವಡಿಸಿದ್ದ ಕಬ್ಬಿಣದ ಪಕ್ಕಾಸಿನ ಕಬ್ಬಿಣದ ರಾಡ್‌ನಲ್ಲಿದ್ದ ನೀರುಳ್ಳಿ ತೊಟ್ಟೆ ತೆಗೆಯಲು ಕಬ್ಬಿಣದ ರಾಡ್ ಮುಟ್ಟಿದಾಗ ವಿದ್ಯುತ್ ಶಾಕ್ ತಗಲಿತು. ಅಲ್ಲೇ ಇದ್ದ ಇನ್ನೋರ್ವ ಕಾರ್ಮಿಕ ಕೂಡಲೇ ಪ್ಲಾಸ್ಟಿಕ್ ಟೇಬಲ್‌ನ ಕಾಲಿನಿಂದ ಸೋನುಸಿಂಗ್‌ನನ್ನು ದೂಡಿ ಕೆಳಗೆ ಬೀಳುವಂತೆ ಮಾಡಿದರು. ಆ ವೇಳೆಗೆ ಸೋನು ಸಿಂಗ್‌ನ ಯಾವುದೇ ಚಲನೆ ಇರಲಿಲ್ಲ. ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಷ್ಟರಲ್ಲಿ ಸೋನುಸಿಂಗ್ ಮೃತಪಟ್ಟಿದ್ದಾರೆ. ಶಾಮಿಯಾನ ಅಂಗಡಿ ಮಾಲಕ ಅಸಮರ್ಪಕವಾಗಿ ವಿದ್ಯುತ್ ಸಂಪರ್ಕ ಅಳವಡಿಸಿರುವುದರಿಂದ ವಿದ್ಯುತ್ ಆಘಾತ ಉಂಟಾಗಿದೆ ಎನ್ನಲಾಗಿದೆ. ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News