×
Ad

ನೂತನ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೊದಲ ಸಭೆ

Update: 2025-05-21 19:04 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನೂತನ ಕಟ್ಟಡ ‘ಪ್ರಜಾ ಸೌಧ’ ಶುಕ್ರವಾರ ಉದ್ಘಾಟನೆಗೊಂಡಿದ್ದು, ಬುಧವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಡಾ. ಆನಂದ್ ಕೆ ನೇತೃತ್ವದಲ್ಲಿ ನಡೆಯುವುದರೊಂದಿಗೆ ನೂತನ ಕಟ್ಟಡದಲ್ಲಿ ಮೊದಲ ಸಭೆಯಾಗಿ ಗಮನ ಸೆಳೆಯಿತು.

ನೂತನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಮೊದಲ ಸಭೆಗೆ ಆಗಮಿಸಿದ ಅಧಿಕಾರಿಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಬಹಳ ಉತ್ಸಾಹದಿಂದ ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಗಳು, ಪರಸ್ಪರ ಸಂತೋಷದಿಂದ ಹಸ್ತಲಾಘವ ಮಾಡಿ ಖುಶಿಪಟ್ಟರು.

ಅಧಿಕಾರಿಗಳ ವಾಹನಗಳನ್ನು ಜಿಲ್ಲಾಧಿಕಾರಿ ಕಚೇರಿ ಆವರಣದ ವಿಶಾಲ ಆವರಣದಲ್ಲಿ ಚಾಲಕರು ಪಾಕಿರ್ಂಗ್ ಮಾಡಿದ್ದು, ಸರ್ಕಾರಿ ವಾಹನ ಚಾಲಕರಿಗೆ ಹರ್ಷ ಮೂಡಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News