ಜ.22ರಂದು ಮೂಳೆ ಖನಿಜಾಂಶ ಸಾಂದ್ರತೆ ಉಚಿತ ತಪಾಸಣೆ ಶಿಬಿರ
ಮಂಗಳೂರು, ಜ.19: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ಮೆಡಿಲಾಬ್ ಇಂಡಿಯಾ ಫಾರ್ಮ ಬೆಂಗಳೂರು ಇವುಗಳ ಆಶ್ರಯದಲ್ಲಿ ‘ಮೂಳೆ ಖನಿಜಾಂಶ ಸಾಂದ್ರತೆ ಉಚಿತ ತಪಸಣಾ ಶಿಬಿರ ಜ.22ರಂದು ಮಂಗಳೂರಿನ ಕಾರ್‌ಸ್ಟ್ರೀಟ್‌ನ ಲಕ್ಷ್ಮೀ ಕ್ಲಿನಿಕ್‌ನಲ್ಲಿ ಆಯೋಜಿಸಲಾಗಿದೆ. ಮಂಗಳೂರು ರೋಟರಿ ಸೆಂಟ್ರಲ್‌ನ ಅಧ್ಯಕ್ಷ ಭಾಸ್ಕರ ರೈ ಕಟ್ಟ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳಗ್ಗೆ 10:30ರಿಂದ ಸಂಜೆ 5 :30ರ ತನಕ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.
ಹಾಸನದ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಮಾಜಿ ಪ್ರಾಧ್ಯಾಪಕಿ ಡಾ. ಜ್ಯೋತಿ ಕೆ ಅವರು ಮೂಳೆ ಖನಿಜಾಂಶ ಸಾಂದ್ರತೆ ತಪಾಸಣೆ ಮತ್ತು ಸಮಾಲೋಚನೆ ನಡೆಸಲಿದ್ದಾರೆ ಎಂದರು.
ಮೂಳೆ ಸವಕಳಿಯನ್ನು ತಡೆಗಟ್ಟಿದರೆ ದೀರ್ಘಕಾಲದ ಮಂಡಿ ನೋವು, ಬೆನ್ನುನೋವು ಸೇರಿದಂತೆ ಹಲವು ರೀತಿಯ ಮೂಳೆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಸಾಮಾನ್ಯವಾಗಿ 30 ವರ್ಷ ಮೇಲ್ಪಟ್ಟವರಲ್ಲಿ ಕಂಡುಬರುವ ಮಂಡಿ ನೋವು. ಬೆನ್ನು ನೋವು, ಸಂಧಿ ನೋವು, ನಿರಂತರ ಮೂಳೆ ಮುರಿತಗಳಿಗೆ ಕಾರಣವಾಗುವುದು ಮೂಳೆ ಸವಕಳಿ, ಈ ರೀತಿಯ ಮೂಳೆ ಸವಕಳಿ ಹಾಗೂ ಮೂಳೆ ಟೊಳ್ಳಾಗುವಿಕೆಯನ್ನು ಪತ್ತೆ ಹಚ್ಚಿ ದೀರ್ಘ ಕಾಲದ ಅಸ್ವಸ್ಥತೆಯನ್ನು ನಿವಾರಿಸಲು ಮೂಳೆ ಸವಕಳಿಯನ್ನು ತಡೆಗಟ್ಟುವುದು ಅತ್ಯಗತ್ಯ. ಇದಕ್ಕೆ ಸಂಬಂಧಿಸಿದ ಉಪಯುಕ್ತ ತಪಾಸಣೆ ಮತ್ತು ಮಾಹಿತಿಯನ್ನು ಒದಗಿಸಲು ಈ ವಿಶೇಷ ಶಿಬಿರ ಏರ್ಪಡಿಸಲಾಗಿದೆ ಎಂದು ಭಾಸ್ಕರ ರೈ ಹೇಳಿದರು.
ತಜ್ಞ ಆಯುರ್ವೇದ ವೈದ್ಯೆ ಡಾ. ಜ್ಯೋತಿ ಕೆ , ಮಂಗಳೂರು ರೋಟರಿ ಕ್ಲಬ್ ಮಾಜಿ ಅಧ್ಯಕ್ಷರುಗಳಾದ ಸಂತೋಷ್ ಶೇಟ್ ಮತ್ತು ರಾಜೇಶ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.