ಗಲ್ಫ್ ರಿಟಾಯರೀಸ್ ಎಸೋಸಿಯೇಶನ್: ಮಾಸಿಕ ಸಭೆ
Update: 2023-08-08 19:11 IST
ಮಂಗಳೂರು : ಗಲ್ಫ್ ರಿಟಾಯರೀಸ್ ಎಸೋಸಿಯೇಶನ್ ನ ಮಾಸಿಕ ಸಭೆಯು ಕಂಕನಾಡಿಯ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ಇಂದು ನಡೆಯಿತು.
ಜತೆ ಕಾರ್ಯದರ್ಶಿ ಯೂಸುಫ್ ಆಲಡ್ಕ ಸ್ವಾಗತಿಸಿದರು. ಅಧ್ಯಕ್ಷತೆ ವಹಿಸಿದ್ದ ಮಿತ್ತೂರು ಹಂಝಾ ಅವರು ಸಂಸ್ಥೆಯ ಉದ್ದೇಶಗಳನ್ನು ವಿವರಿಸಿ, ಎಲ್ಲ ಸದಸ್ಯರ ಸಹಕಾರ ಕೋರಿದರು. ಕಂಕನಾಡಿಯ ಕುನಿಲ್ ಕಾಂಪ್ಲೆಕ್ಸ್ ನಲ್ಲಿ ಕಚೇರಿ ಕಾರ್ಯಾಚರಿಸುವುದಾಗಿ ತಿಳಿಸಿದರು.
ಇಬ್ರಾಹೀಂ ಬಂಡಾಡಿ ಕೆಲವು ಎಕ್ಸ್ಪೋರ್ಟ್ ಬಿಸಿನೆಸ್ ಬಗ್ಗೆ ಮಾಹಿತಿ ನೀಡಿದರು. ಕೋಶಾಧಿಕಾರಿ ಅನ್ವರ್ ಫಳ್ನೀರ್, ಉಪಾಧ್ಯಕ್ಷರಾದ ಆದಂ ಬ್ಯಾರಿ, ಪ್ರಧಾನ ಸಲಹೆಗಾರ ಮುಹಮ್ಮದ್ ಬ್ಯಾರಿ ಬೊಳ್ಳಾಯಿ ನಿವೃತ್ತ ACF ಉಪಸ್ಥಿತರಿದ್ದರು. ಅಬ್ದುಲ್ಲಾ ಕಂದಕ್ ಮತ್ತು ಸಾದಿಕ್ ರವರು ಸಹಕರಿಸಿದರು.