×
Ad

ಗುತ್ತಿಗಾರು | ಅಸ್ವಸ್ಥಗೊಂಡು ಎರಡು ತಿಂಗಳ ಮಗು ಮೃತ್ಯು

Update: 2025-12-12 00:19 IST

ಸಾಂದರ್ಭಿಕ ಚಿತ್ರ | Photo Credit : freepik.com

ಸುಳ್ಯ, ಡಿ.11: ತೀವ್ರ ಅಸ್ವಸ್ಥಗೊಂಡು ವಾಂತಿ ಮಾಡಲು ಪ್ರಾರಂಭಿಸಿದ ಎರಡು ತಿಂಗಳ ಮಗು ಉಸಿರಾಟದ ಸಮಸ್ಯೆಯಿಂದ ಮೃತಪಟ್ಟ ಘಟನೆ ಕಮಿಲದಲ್ಲಿ ನಡೆದಿದೆ.

ಗುತ್ತಿಗಾರು ಗ್ರಾಮದ ಕಮಿಲದ ಮಾಧವ-ವೀಣಾ ದಂಪತಿಯ ಗಂಡು ಮಗು ನಿಶ್ಚಿತ್ ಡಿ.8 ರಂದು ಮುಂಜಾನೆ ವಾಂತಿ ಮಾಡಲು ಆರಂಭಿಸಿದ್ದು, ಮನೆಯವರು ಮಗುವನ್ನು ಕುಂಬ್ರದ ಕ್ಲಿನಿಕ್‌ವೊಂದರಿಂದ ಔಷಧಿ ತಂದಿದ್ದರು. ರಾತ್ರಿ ಮಗುವಿಗೆ ಮತ್ತೆ ಉಸಿರಾಟದ ಸಮಸ್ಯೆ ಉಂಟಾದ ಕಾರಣ ಪುತ್ತೂರಿನ ವೈದ್ಯರ ಸೂಚನೆಯಂತೆ ಮಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.

ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News