ಮಂಗಳೂರು | ಕಾಣೆಯಾದವರ ಪತ್ತೆಗೆ ಮನವಿ
Update: 2025-12-12 00:01 IST
ಮಂಗಳೂರು,ಡಿ.11: ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಗುಡದಪ್ಪ ರೇಹಾಳ (64) ಎಂಬವರು ನ.25ರಂದು ತಿರುಗಾಡಲೆಂದು ಮನೆಯಿಂದ ಹೋದವರು ಈವರೆಗೂ ವಾಪಸ್ ಬಾರದೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಸುಮಾರು 5.5 ಅಡಿ ಎತ್ತರದ, ಸಾಧಾರಣ ಶರೀರದ, ಗೋಧಿ ಮೈಬಣ್ಣದ ಇವರು ಕಾಣೆಯಾದ ದಿನ ತಿಳಿ ನೀಲಿ ಬಣ್ಣದ ಉದ್ದ ತೋಳಿನ ಶರ್ಟ್ ಮತ್ತು ಕಪ್ಪುಬಣ್ಣದ ಪ್ಯಾಂಟ್ ಧರಿಸಿದ್ದರು. ಕನ್ನಡ, ತುಳು ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ ಎಂದು ಪ್ರಕಟನೆ ತಿಳಿಸಿದೆ.