ಉಪ್ಪಿನಂಗಡಿ | ಕಾರು ಢಿಕ್ಕಿ: ಬೈಕ್ ಸವಾರ ಗಂಭೀರ
Update: 2025-12-12 00:42 IST
ಉಪ್ಪಿನಂಗಡಿ, ಡಿ.11: ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಡಿ.11ರಂದು ರಾತ್ರಿ ನೆಕ್ಕಿಲಾಡಿಯಲ್ಲಿ ನಡೆದಿದೆ.
ಮಠ ನಿವಾಸಿ ಬದ್ರುದ್ದೀನ್ ಗಾಯಗೊಂಡವರು.
ಬದ್ರುದ್ದೀನ್ ಕೂಟೇಲಿನಲ್ಲಿರುವ ಹೋಟೆಲೊಂದರಲ್ಲಿ ಕೆಲಸಕ್ಕಿದ್ದರೆನ್ನಲಾಗಿದೆ. ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಪ್ಪಿನಂಗಡಿಯಿಂದ ನೆಕ್ಕಿಲಾಡಿಗೆ ರಾಂಗ್ ಸೈಡ್‌ನಲ್ಲಿ ಸಾಗುತ್ತಿದ್ದಾಗ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕಾರು ಢಿಕ್ಕಿಯಾಗಿದೆ.
ಗಂಭೀರ ಗಾಯಗೊಂಡ ಬದ್ರುದ್ದೀನ್‌ರಿಗೆ ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ.