×
Ad

ಹಂಝ ಮಲಾರ್‌ರ ʼಅರ್ಧ ಹಿಂದೂ-ಅರ್ಧ ಮುಸ್ಲಿಂʼ ಕಥಾಸಂಕಲನ ಬಿಡುಗಡೆ

Update: 2025-11-14 18:18 IST

ಬೆಂಗಳೂರು, ನ.14: ವೀರಲೋಕ ಪ್ರಕಾಶನವು ಬೆಂಗಳೂರಿನ‌ ಶಾಲಿನಿ ಮೈದಾನದಲ್ಲಿ ನ.14ರಿಂದ 16ರವೆರೆಗೆ ಆಯೋಜಿಸಿರುವ ಪುಸ್ತಕ ಸಂತೆಯಲ್ಲಿ ಪತ್ರಕರ್ತ ಹಂಝ ಮಲಾರ್ ಬರೆದ "ಅರ್ಧ ಹಿಂದೂ- ಅರ್ಧ ಮುಸ್ಲಿಂ" ಕಥಾಸಂಕಲನವು ಶುಕ್ರವಾರ ಬಿಡುಗಡೆಗೊಂಡಿತು.

ಈ ಸಂದರ್ಭ ಮಾತನಾಡಿದ ಶಾಸಕ ಸಿ.ಕೆ.ರಾಮಮೂರ್ತಿ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತೀಯರು ಎಂದಿಗೂ ಕೂಡ ಹಿಂದೂ-ಮುಸ್ಲಿಮರು ಅಂತ ಕಚ್ಚಾಡಬಾರದು. ಅಂತಹ ವಾತಾವರಣ ಸೃಷ್ಟಿ ಆಗದಂತೆ ನೋಡಬೇಕು. ಎಲ್ಲರೂ ಸೌಹಾರ್ದದಿಂದ ಬದುಕಿ ಬಾಳಬೇಕು ಎಂದರು.

ವೀರಕಪುತ್ರ ಶ್ರೀನಿವಾಸ ಅವರು ಈ ಪುಸ್ತಕ ಸಂತೆಯ ಮೂಲಕ ಕನ್ನಡ ಪರ ಆಂದೋನಲವನ್ನೇ ಸೃಷ್ಟಿಸುತ್ತಿದ್ದಾರೆ. ‌ಕನ್ನಡದ ಮನಸ್ಸನ್ನು ಒಗ್ಗೂಡಿಸುವ ಅವರ ಪ್ರಯತ್ನ ಶ್ಲಾಘನೀಯ. ಈ ಪುಸ್ತಕ ಸಂತೆಯು ಎಲ್ಲರ ಮನೆಯಲ್ಲಿ ಗ್ರಂಥಾಲಯದ ರಚನೆಗೆ ಸ್ಫೂರ್ತಿ ನೀಡಲಿ ಎಂದರು.

ಚಲನಚಿತ್ರ ನಿರ್ದೇಶಕ ಟಿ.ಎನ್. ಸೀತಾರಾಂ, ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಬಿ. ಸೋಮಶೇಖರ ಮಾತನಾಡಿದರು. ವೀರಲೋಕದ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News