ಜು.27 ಮಂಗಳೂರಿನಲ್ಲಿ ಹೋಮೀಯೊಪತಿ ವೈದ್ಯರ ವಿಚಾರ ಸಂಕಿರಣ
ಮಂಗಳೂರು, ಜು.26: ಭಾರತೀಯ ಹೋಮಿಯೋಪಥಿಕ್ ವೈದ್ಯರ ಸಂಘ (ಐಎಚ್‌ಎಂಎ) ಕರ್ನಾಟಕ ರಾಜ್ಯ ಮತ್ತು ಮಂಗಳೂರು ಘಟಕದ ಆಶ್ರಯದಲ್ಲಿ ಜುಲೈ 27ರಂದು ಮಂಗಳೂರಿನ ಹೋಟೆಲ್ ಶ್ರೀನಿವಾಸ ಸಾಫ್ರಾನ್ ಸಭಾಂಗಣದಲ್ಲಿ ಹೋಮೀಯೊಪತಿ ವೈದ್ಯರ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಮುಖ್ಯ ಉದ್ದೇಶ, ಹೋಮೀಯೊಪತಿ ಚಿಕಿತ್ಸಾ ಪದ್ಧತಿಯ ವೈಜ್ಞಾನಿಕತೆಯನ್ನು ಬೆಳಕಿಗೆ ತಂದು, ಪ್ರಾಯೋಗಿಕ ಅನುಭವಗಳು ಮತ್ತು ನವೀನ ಸಂಶೋಧನೆಗಳ ಮೂಲಕ ತಜ್ಞರು ಹಂಚಿಕೊಳ್ಳುವ ವೇದಿಕೆಯನ್ನು ಸೃಷ್ಟಿಸುವುದಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಎಚ್‌ಎಮ್‌ಎ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಪ್ರವೀಣ್ ರಾಜ್ ಆಳ್ವ ವಹಿಸಲಿದ್ದಾರೆ.
ಐಎಚ್‌ಎಮ್‌ಎ ಮಂಗಳೂರು ಘಟಕದ ಅಧ್ಯಕ್ಷ ಡಾ. ಪ್ರಸನ್ನ ಕುಮಾರ ಹಾಗೂ ಐಎಚ್‌ಎಮ್‌ಎ ರಾಷ್ಟ್ರೀಯ ಕಾರ್ಯದರ್ಶಿ ಡಾ. ಅವಿನಾಶ್ ವಿ ಎಸ್ ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವಿಚಾರ ಸಂಕಿರಣದಲ್ಲಿ ಮಲ್ಲಾಪುರಂನ ಖ್ಯಾತ ಹೋಮೀಯೊಪತಿ ತಜ್ಞ ಡಾ. ಶ್ರೀಕಾಂತ್ ವಿ ಮಂಗಳೂರಿನ ತಜ್ಞ ವೈದ್ಯರುಗಳಾದ ಡಾ. ಜಾಲಿ ಡಿ ಡಾ. ಹರಿಚರಣ್ ಶೆಣೈ ಮೆಲ್ಲೊ ಉಪನ್ಯಾಸ ನೀಡಲಿರುವರು.
ಹೋಮಿಯೋಪಥಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ದಕ್ಷಿಣ ಕನ್ನಡ, ಉಡುಪಿ ಹಾಗೂ ಮಡಿಕೇರಿ ಜಿಲ್ಲೆಯ ವೈದ್ಯರು ಈ ವಿಚಾರ ಸಂಕಿರಣ ದಲ್ಲಿ ಭಾಗವಹಿಸಲಿದ್ದಾರೆ ಎಂದು ಐಎಚ್‌ಎಮ್‌ಎ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಪ್ರವೀಣ್ ಕುಮಾರ್ ರೈ ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.