×
Ad

IEBI ಪಬ್ಲಿಕ್ ಪರೀಕ್ಷೆ: ಕೈಕಂಬ ರೇಂಜ್ ಮಟ್ಟದಲ್ಲಿ ಮುಹಮ್ಮದ್ ಸಅದ್ ಪ್ರಥಮ, ಶಿಝಾ ನಫೀಸಾ ದ್ವಿತೀಯ

Update: 2024-03-28 14:55 IST

ಮಂಗಳೂರು - ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್ ಆಫ್‌ ಇಂಡಿಯಾ ಇದರ ಅಧೀನದಲ್ಲಿ ನಡೆದ ಪಬ್ಲಿಕ್ ಪರೀಕ್ಷೆಯಲ್ಲಿ‌ ಕುಪ್ಪೆಪದವು ಮದೀನತುಲ್ ಉಲೂಮ್ ಹೈಯರ್ ಸೆಕೆಂಡರಿ ಮದ್ರಸಕ್ಕೆ ಕೈಕಂಬ ರೇಂಜ್ ಮಟ್ಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಲಭಿಸಿದೆ.

 ಮುಹಮ್ಮದ್ ಶರೀಫ್ ಮತ್ತು ಶಾಹಿದಾ ದಂಪತಿಯ ಪುತ್ರ ಐದನೇ ತರಗತಿ ವಿದ್ಯಾರ್ಥಿ ಮುಹಮ್ಮದ್ ಸಅದ್  ಅತ್ಯಧಿಕ ಅಂಕ ಪಡೆಯುವ ಮೂಲಕ ಪ್ರಥಮ ಹಾಗೂ ಅಬ್ದುಲ್ ರಹ್ಮಾನ್ ಬದ್ರಿಯಾ ಮತ್ತು ಝೀನತ್ ದಂಪತಿಯ ಪುತ್ರಿ  ಶಿಝಾ ನಫೀಸಾ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ವಿದ್ಯಾರ್ಥಿಗಳ ಅಮೋಘ ಸಾಧನೆಗೆ ಕಾರಣಕರ್ತರಾದ ಮದ್ರಸ ಪ್ರಾಂಶುಪಾಲ K.H.U ಶಾಫಿ ಮದನಿ ಉಸ್ತಾದ್ ಕರಾಯ, ತರಗತಿ ಅಧ್ಯಾಪಕರಾದ ನೌಷಾದ್ ಮದನಿ ಕುಕ್ಕಿಲ ಮತ್ತು ಬದ್ರಿಯಾ ಜುಮಾ ಮಸ್ಜಿದ್ & ಮದೀನತುಲ್ ಉಲೂಮ್ ಮದ್ರಸ ಕುಪ್ಪೆಪದವು ಇದರ ಆಡಳಿತ ಸಮಿತಿಗೆ ಮತ್ತು ರಕ್ಷಕರಿಗೆ SJM ಕೈಕಂಬ ರೇoಜ್ ಪ್ರತ್ಯೇಕ ಅಭಿನಂದನೆ ಸಲ್ಲಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News