×
Ad

ದಾರುನ್ನೂರ್ ನಲ್ಲಿ ಮರ್ಹೂಂ ನೌಷಾದ್ ಹಾಜಿ ಮೆಮೋರಿಯಲ್ ಬ್ಲಾಕ್ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ

Update: 2024-11-17 14:33 IST

 ಮೂಡುಬಿದ್ರೆ: ದಾರುನ್ನೂರ್ ನಲ್ಲಿ ನಿರ್ಮಿಸಲ್ಪಟ್ಟ ಮರ್ಹೂಂ ನೌಷಾದ್ ಹಾಜಿ ಮೆಮೋರಿಯಲ್ ಬ್ಲಾಕ್ ನೂತನ ಕಟ್ಟಡವನ್ನು ಇನಾಯತ್ ಆಲಿ ಯವರು ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಾರುನ್ನೂರ್ ಕೇಂದ್ರ ಸಮಿತಿ ಗೌರವಾಧ್ಯಕ್ಷ ರಾದ ಜನಾಬ್ ಶರೀಫ್ ಹಾಜಿ ವೈಟ್ ಸ್ಟೋನ್ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಖಾಝಿ ದಾರುನ್ನೂರ್ ಕೇಂದ್ರ ಸಮಿತಿ ಅಧ್ಯಕ್ಷರಾದ ತ್ವಾಖ ಅಹ್ಮದ್ ಮುಸ್ಲಿಯಾರ್ ರವರ ದುಆದೊಂದಿಗೆ ಸಭಾ ಕಾರ್ಯಕ್ರಮ ಪ್ರಾರಂಭ ವಾಯಿತು.

ದಾರುನ್ನೂರ್ ಕೇಂದ್ರ ಸಮಿತಿ ಕೋಶಾಧಿಕಾರಿ ಜನಾಬ್ ಉಸ್ಮಾನ್ ಹಾಜಿ (ಏರ್ ಇಂಡಿಯಾ) ಅತಿಥಿಗಳನ್ನು ಸ್ವಾಗತಿಸಿದರು.

ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಜನಾಬ್ ಇಬ್ರಾಹಿಂ ಹಾಜಿ ಕೊಡಿಜಾಲ್ ರವರು ಮಾತನಾಡಿ ದಾರುನ್ನೂರ್ ನ ಅಭಿವೃದ್ಧಿ ಗಾಗಿ ಸಹಕಾರ ನೀಡುತ್ತಿರುವ ಎಲ್ಲಾ ಹಿತೈಷಿಗಳನ್ನು ಅಭಿನಂದಿಸಿದರು.

ವಿದ್ಯಾರ್ಥಿಗಳಾದ ಝಾಹಿದ್ ವಿಟ್ಲ ಮತ್ತು ರಾಫಿಹ್ ಅಬೂಬಕ್ಕರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ದಾರುನ್ನೂರ್ ಗಾಗಿ ಸರ್ವ ವಿಧದಲ್ಲಿ ಸಹಕಾರ ನೀಡುತ್ತಿರುರುವ ಇನಾಯತ್ ಅಲಿ ಮತ್ತು ಶಾಫಿ ಮೂಲರಪಟ್ನ ರವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶಾಹುಲ್ ಹಮೀದ್ ಕೆ.ಕೆ ದಾರುನ್ನೂರ್ ಕೇಂದ್ರ ಸಮಿತಿ ಪದಾಧಿಕಾರಿಗಳು, ವಿದ್ಯಾರ್ಥಿ ವೃಂದ, ಅಧ್ಯಾಪಕ ವೃoದ, ಪೋಷಕರು ಉಪಸ್ಥಿತರಿದ್ದರು.

ದಾರುನ್ನೂರ್ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸಮದ್ ಹಾಜಿಯವರು ವಂದಿಸಿದರು. ವಿದ್ಯಾರ್ಥಿ ಶಹಿಬಾನ್ ಕಾರ್ಯಕ್ರಮ ನಿರೂಪಿಸಿದರು.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News