×
Ad

ನರೇಗಾ ಹೆಸರು ಬದಲಾವಣೆಗೆ ಎಸ್ ವೈ ಎಸ್ ಖಂಡನೆ

Update: 2025-12-17 19:06 IST

ಮಂಗಳೂರು: ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿರುವ ಮಹಾತ್ಮ ಗಾಂಧಿಯವರ ಹೆಸರನ್ನು ಬದಲಿಸುವ ಪ್ರಯತ್ನವನ್ನು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು ಖಂಡಿಸಿದೆ.

ಗಾಂಧೀಜಿಯವರ ಹೆಸರನ್ನು ಅಳಿಸಿ ಹಾಕುವ ಮೂಲಕ ಕೇಂದ್ರ ಸರ್ಕಾರವು ತನ್ನ ಗಾಂಧೀ ವಿರುದ್ಧ ನಿಲುವನ್ನು ಬಹಿರಂಗಪಡಿಸಿದೆ. ಉದ್ಯೋಗ ನೀಡುವ ಮೂಲಕ ಗ್ರಾಮೀಣ ಜನತೆಯ ಕೈ ಬಲಪಡಿಸುವ ಗಾಂಧೀಜಿಯವರ ಆಶಯದಂತೆ ಜಾರಿಗೆ ಬಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಹೆಸರು ಅಳಿಸುವ ಸರಕಾರ, ಮುಂದೆ ಯೋಜನೆಯನ್ನೇ ಅಳಿಸಿ ಹಾಕಿದರೂ ಆಶ್ಚರ್ಯವಿಲ್ಲ. 'ಎಂ ನರೇಗಾ' ಜಾಗದಲ್ಲಿ 'ವಿಬಿ-ಜಿ ರಾಮ್ ಜಿ'ಯನ್ನು ತರಲಾಗುತ್ತಿದ್ದು, ಇದರಲ್ಲಿರುವ 'ರಾಮ್' ಮಹಾತ್ಮ ಗಾಂಧಿಯವರ ಕೊನೆಯ ಮಾತಾಗಿದ್ದ 'ಹೇ ರಾಮ್'ನಲ್ಲಿರುವ ರಾಮ ಆಗಿರದೆ, ಅವರನ್ನು ಕೊನೆಗೊಳಿಸಿದ ನಾಥೂರಾಮನಲ್ಲಿರುವ ರಾಮನನ್ನು ಪ್ರತಿನಿಧಿಸುವಂತಿದೆ. ಈ ಹೆಸರು ಬದಲಾವಣೆಯಿಂದ ಗಾಂಧಿ ಹಂತಕನ ಬೆಂಬಲಿಗರಿಗೆ ಖುಷಿಯಾದೀತೆ ಹೊರತು ಬೇರೇನು ಲಾಭವಿದೆ ? ಎಂದು ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಎಂ ಅಬೂಬಕರ್ ಸಿದ್ದೀಖ್ ಪ್ರಶ್ನಿಸಿದ್ದಾರೆ.

ಯೋಜನೆಗೆ ಹೆಸರು ಹಾಕುವುದರಿಂದ ಅಥವಾ ಅಳಿಸುವುದರಿಂದ ಬದಲಾಗುವಷ್ಟು ಮಹಾತ್ಮ ಗಾಂಧೀಜಿಯವರ ವ್ಯಕ್ತಿತ್ವ ದುರ್ಬಲವಲ್ಲ ಎಂಬುದನ್ನು ಸರ್ಕಾರ ಮನಗಂಡು, ರಾಷ್ಟ್ರ ಕಟ್ಟಿದವರೊಂದಿಗೆ ಘನತೆಯಿಂದ ವರ್ತಿಸಲು ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News