×
Ad

ಮೆಲ್ಕಾರ್ ಮಹಿಳಾ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

Update: 2023-08-15 22:48 IST

ಬಂಟ್ವಾಳ : ಮಾರ್ನಬೈಲು ಇಲ್ಲಿನ ಮೆಲ್ಕಾರ್ ಮಹಿಳಾ ಪದವಿ ಪೂರ್ವ ಮತ್ತು ಪದವಿ ಕಾಲೇಜಿನಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಧ್ವಜರೋಹಣಗೈದ ಕಾಲೇಜಿನ ಪ್ರಾಂಶುಪಾಲ ಬಿ.ಕೆ. ಅಬ್ದುಲ್ ಲತೀಫ್ ಮಾತನಾಡಿ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟ ಗಾರರು ಬಲಿದಾನಗೈದು ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಅದಕ್ಕಾಗಿ ನಾವೆಲ್ಲರೂ ಜಾತಿ ಮತ ಪಕ್ಷ ಮರೆತು ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕ ಎಂ.ಡಿ ಮಂಚಿ, ಅಬ್ದುಲ್ ಮಜೀದ್ ಎಸ್, ವಿದ್ಯಾರ್ಥಿನಿಯರಾದ ತಂಶೀನ, ಮರಿಯಮ್ ರಫಾ, ಶೈಬಾ ಇವರು ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿದರು.

ವೇದಿಕೆಯಲ್ಲಿ ಉಪ ಪ್ರಾಂಶುಪಾಲೆ ಆಂಜಲಿನ ಸುನೀತ ಪಿರೇರ, ಮಮತಾ ರಾವ್ ಉಪಸ್ಥಿತರಿದ್ದರು. ದೇಶಭಕ್ತಿ ಗೀತೆಗಳನ್ನು ವಿದ್ಯಾರ್ಥಿನಿಯರು ಹಾಡಿದರು. ವಿದ್ಯಾರ್ಥಿನಿ ಶೈಬಾ ಪ್ರಾರ್ಥನೆ ಹಾಡಿದರು, ಝುಲ್ಫ ಸ್ವಾಗತಿಸಿ, ಸೌಧ ವಂದಿಸಿದರು. ತೌಫೀರ ಕಾರ್ಯಕ್ರಮ ನಿರ್ವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News