ಇನ್ನೋಳಿ: ಬ್ಯಾರೀಸ್ ಇನ್ಸಿಟ್ಯೂಟ್ ಆಫ್ ಎಮರ್ಜಿಂಗ್ ಸೈನ್ಸಸ್ ವತಿಯಿಂದ ಕನ್ನಡ ರಾಜ್ಯೋತ್ಸವ
Update: 2023-11-03 21:29 IST
ಮಂಗಳೂರು : ನಗರ ಹೊರವಲಯದ ಇನ್ನೋಳಿಯ ಬ್ಯಾರೀಸ್ ಇನ್ಸಿಟ್ಯೂಟ್ ಆಫ್ ಎಮರ್ಜಿಂಗ್ ಸೈನ್ಸಸ್ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಶುಕ್ರವಾರ ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ. ಅಝೀಝ್ ಮುಸ್ತಫಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ಮಂಜೂರ್ ಬಾಷಾ, ವಿವಿಧ ವಿಭಾಗದ ಮುಖ್ಯಸ್ಥರಾದ ಪೃಥ್ವಿರಾಜ್, ಡಾ.ನಳಿನಿ, ಖಲೀಲ್ ಶೇಕ್, ಹನ್ನತ್, ಕಾರ್ತಿಕ್ ಉಪಸ್ಥಿತರಿದ್ದರು.
ಧ್ವಜಾರೋಹಣದ ಬಳಿಕ ನಾಡಗೀತೆಯನ್ನು ಹಾಡಲಾಯಿತು. ನಂತರ ಬಹುಮಾನ ವಿತರಣೆ, ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿತು. ವಿದ್ಯಾರ್ಥಿಗಳಾದ ಸುಮಯ್ಯ, ಫರ್ಹಾ, ನಿಸಾನಾ ಕಾರ್ಯಕ್ರಮ ನಿರೂಪಿಸಿದರು.