×
Ad

ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್: ಬರಕಾ ಸ್ಕೂಲ್‌ ವಿದ್ಯಾರ್ಥಿ ಮುಆದ್‌ಗೆ ಚಿನ್ನದ ಪದಕ

Update: 2025-01-17 22:24 IST

ಮಂಗಳೂರು: ಉಡುಪಿಯ ಎನ್ ಆರ್ ಕಲಾಮಂದಿರ ಬೈಂದೂರಿನಲ್ಲಿ ಜರುಗಿದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಸ್ಪರ್ಧೆಯಲ್ಲಿ ಬರಕಾ ಇಂಟರ್‌ ನ್ಯಾಷನಲ್ ಸ್ಕೂಲ್‌ ವಿದ್ಯಾರ್ಥಿ ಎರಡನೇ ತರಗತಿಯ ಮುಅದ್ ಮುಹಮ್ಮದ್ ಯೂಸುಫ್ ಚಿನ್ನದ ಪದಕ ಪಡೆದುಕೊಂಡಿದ್ದಾನೆ.

ಮಂಚಿ ಗ್ರಾಮದ ಮಹಮ್ಮದ್ ಹನೀಫ್ – ಶಮೀಮಾ ದಂಪತಿಯ ಪುತ್ರ ಮುಅದ್ ಮುಹಮ್ಮದ್ ಯೂಸುಫ್ ಚಿನ್ನದ ಪದಕ ಪಡೆದಿದ್ದಾನೆ.

ಸಣ್ಣ ಪ್ರಾಯದಲ್ಲೇ ಅಪೂರ್ವ ಸಾಧನೆಯ ಮೂಲಕ ವಿದ್ಯಾಸಂಸ್ಥೆಯ, ಊರವರ, ಕುಟುಂಬಿಕರ ಶ್ಲಾಘನೆಯೊಂದಿಗೆ ಪ್ರೀತಿಗೆ ಪಾತ್ರನಾಗಿದ್ದಾನೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News