×
Ad

ಉಪ್ಪಿನಂಗಡಿ : ಪತ್ರಿಕಾ ಏಜೆಂಟ್ ಯು. ನಾಗರಾಜ್ ಭಟ್ ನಿಧನ

Update: 2026-02-02 10:42 IST

ಉಪ್ಪಿನಂಗಡಿ: ವಾರ್ತಾ ಭಾರತಿ ಸೇರಿದಂತೆ ವಿವಿಧ ಪತ್ರಿಕೆಗಳ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯು. ನಾಗರಾಜ್ ಭಟ್ (60) ಅವರು ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು.

ಇವರು ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಪತ್ರಿಕಾ ಅಂಗಡಿ ನಡೆಸುತ್ತಿದ್ದ ದಿವಂಗತ ಯು. ವೇಣುಗೋಪಾಲ್ ಭಟ್ ಅವರ ಪುತ್ರರಾಗಿದ್ದಾರೆ.

ಉಪ್ಪಿನಂಗಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಮೊಕ್ತೇಸರರಾಗಿದ್ದ ಇವರು ಸರಳ–ಸಜ್ಜನಿಕೆಯ ಸ್ವಭಾವ, ನೇರ ನಡೆ–ನುಡಿ ಹಾಗೂ ಸಾಮಾಜಿಕ ಕಳಕಳಿ ಹೊಂದಿದ ವ್ಯಕ್ತಿಯಾಗಿದ್ದರು.

ಎಲ್ಲರಿಗೂ ಚಿರಪರಿಚಿತರಾಗಿದ್ದ ನಾಗರಾಜ್ ಭಟ್ ಅವರು ಜ್ವರ ಸಂಬಂಧ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿ ಕೊನೆಯುಸಿರೆಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News

ಇಸ್ಮಾಯೀಲ್