ಮಂಗಳೂರು: ಸೌಹಾರ್ದ ಟ್ರೋಫಿ ಮುಡಿಗೇರಿಸಿದ ಕಂದಕ್ ಟೈಟಾನ್ಸ್
ಮಂಗಳೂರು: ನಗರದ ಕಂದಕ್ ಪರಿಸರದ ಗಲ್ಲಿ ಕ್ರೀಡಾಂಗಣದಲ್ಲಿ ಆರ್ ಎಫ್ ಫಿಶರೀಸ್ ಪ್ರಾಯೋಜಕತ್ವದ ಸೌಹಾರ್ದ ಟ್ರೋಫಿ 2026 ಕಂದಕ್ ಸನ್ರೈಸ್ ವಿರುದ್ಧ ಕಂದಕ್ ಟೈಟನ್ಸ್ ನಾಯಕ ಅನ್ಸಾಫ್ ಸಿಡಿಸಿದ ಸಿಕ್ಸರ್ ನಿಂದ 2 ವಿಕೆಟ್ ಗಳ ರೋಚಕವಾಗಿ ಜಯಗಳಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ಲೀಗ್ ನಲ್ಲಿ ಪ್ರಬಲ ಪೈಪೋಟಿ ನೀಡಿ ಫೈನಲ್ ಧಾವಿಸಿದ್ದ ಕಂದಕ್ ಸನ್ರೈಸ್ ಕೊನೆಯಲ್ಲಿ ಎಡವಿ ರನ್ನರ್ ಆಪ್ ಆಗಿ ಹೊರಹೊಮ್ಮಿತು.
ಫೈನಲ್ ಪಂದ್ಯಾಕೂಟದ ಪಂದ್ಯಶ್ರೇಷ್ಠ ಪ್ರಶಸ್ತಿ ಅನ್ಸಾಫ್ ಟೂರ್ನಿಯಲ್ಲಿ ಉತ್ತಮ ದಾಂಡಿಗನಾಗಿ ಜಾಫರ್ ಸಾಧಿಕ್ , ಅತೀ ಹೆಚ್ಚು ವಿಕೆಟ್ ಪಡೆದುಕೊಂಡ ಝಹೀರ್ ಮತ್ತು ಅಮೋಘ ಪ್ರದರ್ಶನ ತೋರಿದ ಅನ್ಸಾಫ್ ಟೂರ್ನಿಯ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಟೂರ್ನಿಯ ಮುಖ್ಯ ತೀರ್ಪುಗಾರರಾಗಿ ಮುಸ್ತಫ ಬೋಲಾರ್, ಪಂದ್ಯಾಕೂಟಕ್ಕೆ ಯಶಸ್ವಿಯಾಗಿ ಸಹಕರಿಸಿದ ರಾಜು, ಭುವನ್ , ಪ್ರದೀಪ್ ಯು.ಎಮ್. ಮುಕ್ತಾರ್ ಕೆ, ಹಕೀಮ್, ಸಹಕಾರ ನೀಡಿದರು. ಕಾರ್ಯಕ್ರಮದ ನಿರೂಪಣೆಯಾಗಿ ಶಾಝಿಲ್ ಕಂದಕ್ ನಿರ್ವಹಿಸಿದರು.