ಜ.19: ಶಅಬಾನ್ ತಿಂಗಳ ಪ್ರಾರಂಭ
Update: 2026-01-19 20:01 IST
ಮಂಗಳೂರು,ಜ.19: ಸೋಮವಾರ ಅಸ್ತಮಿಸಿದ ಮಂಗಳವಾರ ರಾತ್ರಿ (ಜ.19) ಶಅಬಾನ್ ತಿಂಗಳ ಪ್ರಥಮ ಚಂದ್ರದರ್ಶನವಾಗಿದೆ ಎಂದು ದ.ಕ. ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ತಿಳಿಸಿದ್ದಾರೆ.
ಫೆ.2ರ ಸೋಮವಾರ ಅಸ್ತಮಿಸಿದ ಮಂಗಳವಾರ ರಾತ್ರಿ ಬರಾಅತ್ ರಾತ್ರಿ ಆಗಿರುತ್ತದೆ ಎಂದು ಖಾಝಿ ತಿಳಿಸಿರುವುದಾಗಿ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.