×
Ad

ಕಲ್ಲಡ್ಕ : ಆ. 13 ರಂದು ಚೇರ್‌ಲ್ ಒರ್ನಾಲ್, ಪಂಡತೆ ನೆನಪು ಕಾರ್ಯಕ್ರಮ

Update: 2023-08-11 20:32 IST

ಬಂಟ್ವಾಳ : ಕಲ್ಲಡ್ಕ ಸ್ನೇಹ ಸಮ್ಮಿಲನ ಒಕ್ಕೂಟ ಇದರ ವತಿಯಿಂದ 76 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ "ಚೇರ್ ಲ್ ಒರ್ನಾಲ್, ಪಂಡತೆ ನೆನಪು" ಕಾರ್ಯಕ್ರಮವು ಗೋಳ್ತಮಜಲು ಹಜಾಜ್ ಕಂಪೆನಿಯ ಹಿಂಬಾಗದ ಪಂಡಿತ್ ಗದ್ದೆಯಲ್ಲಿ ಆಗಸ್ಟ್ 13 ರಂದು ಬೆಳಗ್ಗೆ ಸಂಜೆ ತನಕ ನಡೆಯಲಿದೆ ಎಂದು ಕಾರ್ಯಕ್ರಮ ಸಂಯೋಜಕರಾದ ಮನ್ಸೂರ್ ಸೂರಜ್ ಹಾಗೂ ಸತ್ತಾರ್ ಕಲ್ಲಡ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ವಿವಿಧ ರಾಜಕೀಯ, ಸಾಮಾಜಿಕ ಗಣ್ಯರು ಭಾಗವಹಿಸುವರು. ಕಬಡ್ಡಿ, ಹ್ಯಾಂಡ್ ಬಾಲ್, ಹಗ್ಗ ಜಗ್ಗಾಟ, ಉಪ್ಪು ಮೂಟೆ, ಓಟ, ಕಂಬಳ ಓಟ, ಮೂರು ಕಾಲು ಓಟ, ರಿವರ್ಸ್ ಓಟ, ಪಾಲೆ ಓಟ, ವಿಕೆಟ್ ಓಟ ಮೊದಲಾದ ಪಂದ್ಯಾವಳಿಯ ಜೊತೆಗೆ ಬೆಳಿಗ್ಗೆ ಮತ್ತು ಸಂಜೆಯ ಉಪಹಾರ, ಮದ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News