×
Ad

ಗ್ರೀನ್ ವೀವ್ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ

Update: 2025-11-01 22:13 IST

ಮಂಗಳೂರು: ಜಮೀಯ್ಯತುಲ್ ಫಲಾಹ್ ಗ್ರೀನ್ ವೀವ್ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ನಡೆಸಲಾಯಿತು.

ಸಂಸ್ಥೆಯ ಸಂಚಾಲಕರಾದ ಫರ್ವೇಝ್‌ ಅಲಿ ಅವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ವಿದ್ಯಾರ್ಥಿ ಗಳನ್ನು ಉದ್ದೇಶಿಸಿ, ಮಾತನಾಡುತ್ತಾ "ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪಾಲನೆ, ಪರಸ್ಪರ ಸಹೋದರತೆಯೊಂದಿಗೆ ಈ ನೆಲ, ಜಲ ಹಾಗೂ ಭಾಷೆಯನ್ನು ಗೌರವಿಸುವುದರೊಂದಿಗೆ ಜವಾಬ್ದಾರಿಯುತ ಪ್ರಜೆಗಳಾಗಿ ಬಾಳಬೇಕು ಎಂದರು.

ವಿದ್ಯಾರ್ಥಿನಿಯರಾದ ಅಸ್ನಾ ಹಾಗೂ ಈಝ ಕನ್ನಡ ರಾಜ್ಯೋತ್ಸವದ ಭಾಷಣವನ್ನು ಮಾಡಿದರು. ವಿದ್ಯಾರ್ಥಿನಿಯರು ನಾಡಗೀತೆ ಹಾಗೂ ಕನ್ನಡ ಗೀತೆಗಳನ್ನು ಹಾಡಿದರು.

ಪ್ರಾಂಶುಪಾಲರಾದ ಅಬೂಬಕ್ಕರ್.ಕೆ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ನಮಿತಾ ಬಿ.ಎನ್ ಕಾರ್ಯಕ್ರಮ ನಿರೂಪಿಸಿದರು ಹಾಗೂ ಸಿಂತ್ಯ ಲೂಸಿ ಮಸ್ಕರೇನಸ್ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಸಿಬ್ಬಂದಿ ಭಾಗವಹಿಸಿದರು.








Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News