×
Ad

ಕರಾಟೆ ಚಾಂಪಿಯನ್ ಶಿಪ್ | ಕಟಾದಲ್ಲಿ ಶಮಿರಾಜ್ ಆಳ್ವಗೆ ಬೆಳ್ಳಿ ಪದಕ

Update: 2024-09-13 14:26 IST

ಉಪ್ಪಿನಂಗಡಿ: ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‍ಶಿಪ್- 2024 ಕರಾಟೆ ಸ್ಪರ್ಧೆಯ 13 ವರ್ಷದ ವಿಭಾಗದಲ್ಲಿ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಶಮಿರಾಜ್ ಆಳ್ವ ಕಟಾದಲ್ಲಿ ಬೆಳ್ಳಿಪದಕವನ್ನು ಪಡೆದಿದ್ದಾನೆ.

ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಮತ್ತು ಮಂಗಳೂರು ಇಂಡಿಯನ್ ಕರಾಟೆ ಡೋಜೋ ವತಿಯಿಂದ ಕುಲಶೇಖರದ ಕೋರ್ಡೆಲ್ ಚರ್ಚ್ ಮೈದಾನದಲ್ಲಿ ಈ ಚಾಂಪಿಯನ್ ಶಿಪ್ ನಡೆಯಿತು. ಪೆರ್ನೆ ನಿವಾಸಿಯಾಗಿರುವ ಈತ ಪ್ರಮೋದ್ ಆಳ್ವ ಮತ್ತು ಕುಸುಮಾವತಿ ದಂಪತಿಯ ಪುತ್ರನಾಗಿದ್ದು, ಸೆನ್ಸಾಯಿ ಮೋಹನ್ ಪೂಜಾರಿ ಅವರಿಂದ ತರಬೇತಿ ಪಡೆಯುತ್ತಿದ್ದಾನೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News