ಬಸ್ಸಿನಲ್ಲಿ ಕರಿಮಣಿ ಸರ ಕಳವು: ದೂರು
Update: 2023-11-06 23:21 IST
ಮಂಗಳೂರು : ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಗಮನವನ್ನು ಬೇರೆ ಕಡೆ ಸೆಳೆದ ಮೂವರು ಕರಿಮಣಿ ಸರ ಕಳವುಗೈದ ಬಗ್ಗೆ ಬರ್ಕೆ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಯಿ ಭಾಗಿರಥಿ ಮತ್ತು ಕುಟುಂಬದ ಸದಸ್ಯರ ಸಮೇತ ನ.4ರಂದು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ನ.5ರಂದು ಕೊಲ್ಲೂರಿನಿಂದ ಮಂಗಳೂರಿಗೆ ಸರಕಾರಿ ಬಸ್ಸಿನಲ್ಲಿ ಬಂದು ಕಡಬಕ್ಕೆ ಮರಳುವಾಗ ಮೂವರು ಮಹಿಳೆಯರು ತನ್ನ ತಾಯಿಯ ಗಮನವನ್ನು ಬೇರೆ ಕಡೆ ಸೆಳೆದು ತಾಯಿಯ ಕತ್ತಿನಲ್ಲಿದ್ದ 4 ಪವನ್ ತೂಕದ ಚಿನ್ನದ ಕರಿಮಣಿಯನ್ನು ಎಗರಿಸಿ ಪರಾರಿಯಾಗಿದ್ದಾರೆ. ಇದರ ಮೌಲ್ಯ 1,28,000 ರೂ. ಎಂದು ಅಂದಾಜಿಸಲಾಗಿದೆ ಎಂದು ಸುರೇಶ್ ಕುಮಾರ್ ಎಂಬವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.