×
Ad

ಕಾವೂರು ಮಾರುಕಟ್ಟೆ; ವಾರದೊಳಗೆ ಸ್ಥಳಾಂತರಕ್ಕೆ ಅಂಗಡಿ ವ್ಯಾಪಾರಸ್ಥರಿಗೆ ಮೇಯರ್ ಸೂಚನೆ

Update: 2023-11-25 22:32 IST

ಮಂಗಳೂರು : ಕಾವೂರಿನಲ್ಲಿ ಸ್ಮಾರ್ಟ್ ಸಿಟಿ ಅನುದಾನದಿಂದ ನಿರ್ಮಿಸಲಾದ ಕೋಟ್ಯಂತರ ಮೌಲ್ಯದ ಮಾರುಕಟ್ಟೆಯ ಸಂಕೀರ್ಣ ಖಾಲಿ ಬಿದ್ದಿದ್ದು, ಅಂಗಡಿ ಪಡೆದಿರುವ ವ್ಯಾಪಾರಸ್ಥರು ಒಂದು ವಾರದ ಒಳಗಾಗಿ ಸ್ಥಳಾಂತರಗೊಳ್ಳಬೇಕು ಇಲ್ಲದಿ ದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದ್ದಾರೆ.

ಕಾವೂರಿನಲ್ಲಿ ನಿರ್ಮಾಣವಾಗಿರುವ ಮಾರುಕಟ್ಟೆ ಸಂಕೀರ್ಣವನ್ನು ಶನಿವಾರ ಅವರು ವೀಕ್ಷಿಸಿ, ಸುದ್ದಿಗಾರದೊಂದಿಗೆ ಮಾತನಾಡಿದರು.

ಉತ್ತಮವಾದಂತ ಮೀನು ಮಾರುಕಟ್ಟೆ ಅತ್ಯಾಧುನಿಕ ಸೌಲಭ್ಯಗಳನ್ನ ನೀಡಲಾಗಿದ್ದರೂ,ಕಾವೂರು ಜಂಕ್ಷನ್ ನಲ್ಲಿ ಅದ ರಲ್ಲೂ ರಸ್ತೆ ಬದಿಯಲ್ಲಿ ಕುಳಿತು ಮೀನು ಮಾರಾಟ ಮಾಡುವುದು ಸರಿಯಾದ ಕ್ರಮವಲ್ಲ ಎಂದರು.

ಕಾವೂರು ಮಾರುಕಟ್ಟೆಯಲ್ಲಿ ಹಸಿಮೀನು ಕೌಂಟರ್ 12, ತರಕಾರಿ ಅಂಗಡಿ 4, ಹೂವಿನ ಸ್ಟಾಲ್ ಮತ್ತು ಒಣಮೀನು ಸ್ಟಾಲ್ ತಲಾ 2, ಚಿಪ್ಪು ಮೀನು ಸ್ಟಾಲ್ , ಮೊಟ್ಟೆಂಗಡಿ, ಟೀ ಸ್ಟಾಲ್,ಚಿಕನ್ ಸ್ಟಾಲ್ , ಮಟನ್ ಸ್ಟಾಲ್, ಹಣ್ಣು ಹಂಪಲು ಸ್ಟಾಲ್ , ಕ್ಯಾಂಟಿನ್‌ ತಲಾ 1 ಸೇರಿದಂತೆ 42 ಅಂಗಡಿ ಮಳಿಗೆಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಒಂದು ಬಾರಿ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರವಾದರೆ ಗ್ರಾಹಕರು ಕೂಡ ಖಂಡಿತ ಬರುತ್ತಾರೆ. ರಸ್ತೆ ಬದಿ ವಾಹನ ದಲ್ಲಿ ಮೀನು ಮಾರಾಟ ಮಾಡುವುದನ್ನು ಕೂಡ ನಿಯಂತ್ರಣ ಮಾಡಲಾಗುವುದು. ಮಾರುಕಟ್ಟೆ ಸಂಕಿರಣದಲ್ಲಿ ಯಾರೆಲ್ಲ ಅಂಗಡಿಯನ್ನು ಪಡೆದಿದ್ದಾರೆ ಅವರೆಲ್ಲ ಒಂದು ವಾರದ ಒಳಗಾಗಿ ಸ್ಥಳಾಂತರಗೊಳ್ಳಬೇಕು.ಈ ಕುರಿತು ನೋಟೀಸ್ ನೀಡಲಾಗುತ್ತದೆ ಎಂದು ಮೇಯರ್ ಸುಧೀರ್ ಶೆಟ್ಟಿ ಎಚ್ಚರಿಕೆ ನೀಡಿದರು.

ಕಾವುರ್ ಜಂಕ್ಷನ್ ನಲ್ಲಿ ಹೊಸದಾಗಿ ಶೌಚಾಲಯ ನಿರ್ಮಾಣ ಮಾಡುವ ಕುರಿತಂತೆ ಯೋಜನೆ ರೂಪಿಸಲಾಗುವುದು ಇದರ ಜೊತೆಗೆ ಬಸ್ ನಿಲ್ದಾಣ ಸಹಿತ ಅಗತ್ಯ ಸೌಕರ್ಯ ನೀಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಈ ಸಂದರ್ಭ ನುಡಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಲೋಹಿತಮಿ ,ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯೆ ಸುಮಂಗಳ ರಾವ್ ಬಿಜೆಪಿ ಮುಖಂಡ ರಣದೀಪ್ ಕಾಂಚನ್ ,ಸೀತೇಶ್ ಕೊಂಡೆ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News