ಕೃಷ್ಣಾಪುರ : ವಾರ್ಷಿಕ ಸ್ವಲಾತ್ ಮಜ್ಜಿಸ್, ಮುಲ್ತಖಾ ಫೆಸ್ಟ್-2025
ಸುರತ್ಕಲ್ : ಬದ್ರಿಯಾ ಜುಮ್ಮಾ ಮಸ್ಟಿದ್ ಮುಸ್ಲಿಂ ಜಮಾಅತ್ (ರಿ) ಕೃಷ್ಣಾಪುರ ಇದರ ಆಡಳಿತಕ್ಕೊಳಪಟ್ಟಿರುವ ಅಲ್‌ಮದ್ರಸತುಲ್ ಬದ್ರಿಯಾದ "ಮುಕ್ತಖಾ ಫೆಸ್ಟ್-2025" ಪ್ರಯುಕ್ತ ಮದ್ರಸ ಮಕ್ಕಳ ಕಾರ್ಯಕ್ರಮ, ಬುರ್ದಾ ಮಜ್ಜಿಸ್, ವಾರ್ಷಿಕ ಸ್ವಲಾತ್ ಮಜ್ಜಿಸ್ ಹಾಗೂ ಮತ ಪ್ರಭಾಷಣದ ಸಮಾರೋಪ ಸಮಾರಂಭವು ಗುರುವಾರ ಮಸೀದಿಯ ವಠಾರದಲ್ಲಿ ಜರುಗಿತು.
ವಾರ್ಷಿಕ ಸ್ವಲಾತ್ ಮಜ್ಲಿಸ್ ಮತ್ತು ಬುರ್ದಾ ಮಜ್ಲಿಸ್ ನ್ನು ಬದ್ರಿಯಾ ಜುಮ್ಮಾ ಮಸ್ಟಿದ್ ಮುಸ್ಲಿಂ ಜಮಾಅತ್ ಕೃಷ್ಣಾಪುರ ಇದರ ಖಾಝಿ ಅಲ್‌ಹಾಜ್ ಇ.ಕೆ. ಇಬ್ರಾಹಿಂ ಮುಸ್ಲಿಯಾರ್ ಅವರು ಉದ್ಘಾಟಿಸಿ ದುಆ ಆಶೀರ್ವಚನ ನೀಡಿದರು.
ವಾರ್ಷಿಕ ಸ್ವಲಾತ್ ಮಜ್ಲಸ್ ಗೆ ಮಂಜೇಶ್ವರ ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಸಯ್ಯದ್ ಅತಾವುಲ್ಲಾ ತಂಬಳ್ ಮಂಜೇಶ್ವರ ನೇತೃತ್ವ ನೀಡಿದರು. ಹಾಫಿಳ್ ಸ್ವಾದಿಕ್ ಅಲಿ ಫಾಳಿಲಿ ಗೂಡಲ್ಲೂರು ಅವರ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ನಡೆಯಿತು.
ಬದ್ರಿಯಾ ಜುಮ್ಮಾ ಮಸ್ಟಿದ್ ಮುಸ್ಲಿಂ ಜಮಾಅತ್ (ರಿ.) ಕೃಷ್ಣಾಪುರ ಇದರ ಖತೀಬರಾದ ಉಮರುಲ್ ಫಾರೂಖ್ ಸಖಾಫಿ ಅವರು ಪ್ರಾಸ್ತಾವಿಕ ಭಾಷಣ ಗೈದರು.
ಕೃಷ್ಣಾಪುರ ಕೇಂದ್ರ ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಅಲ್‌ಹಾಜ್ ಝಾಕಿರ್ ಹುಸೈನ್ ಬಳ್ಕುಂಜೆ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಆಲೈಡ್ & ಹೆಲ್‌ಕೇರ್ ಕೌನ್ಸಿಲ್ ಅಧ್ಯಕ್ಷ ಯು.ಟಿ ಇಫಿಕಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಮಾಜಿ ಶಾಸಕ ಅಲ್‌ಹಾಜ್ ಮೊದಿನ್ ಬಾವ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಹಾಜಿ ಬಿ.ಎಂ. ಫಾರೂಕ್, ಕೃಷ್ಣಾಪುರ ಅಲ್ ಬದ್ರಿಯಾ ಎಜ್ಯುಕೇಶನಲ್ ಅಸೋಸಿಯೇಶನ್ ಅಧ್ಯಕ್ಷ ಅಬೂಬಕ್ಕರ್ ಕೃಷ್ಣಾಪುರ, ದ.ಕ ಜಿಲ್ಲಾ ವಕ್ಸ್ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸೀರ್ ಲಕ್ಕಿಸ್ಟಾರ್, ಸುಲ್ತಾನ್ ಡೈಮಂಡ್ & ಗೋಲ್ಡ್ ನ ಮ್ಯಾನೆಜಿಂಗ್ ಡೈರೆಕ್ಟರ್ ಅಬ್ದುಲ್ ರವೂಫ್, ಉದ್ಯಮಿಗಳಾದ ಬಿ.ಎ.ಫೌಝ್, ಇಮ್ಮಿಯಾಝ್, ಕೆ.ಎಂ ಮುಹಮ್ಮದ್ ಶರೀಫ್ ಸೌದಿ ಅರೆಬಿಯಾ, ಬದ್ರುಲ್ ಹುದಾ ಮಾಜಿ ಅಧ್ಯಕ್ಷ ಅಬೂಬಕ್ಕರ್ ಕನ್ನಡ ನಾಡು, ಮೊಹಿಯುದ್ದಿನ್, ಕೇಂದ್ರ ಬದ್ರಿಯಾ ಜುಮಾ ಮಸ್ಟಿದ್ ಕೃಷ್ಣಾಪುರ ಉಪಾಧ್ಯಕ್ಷ ಟಿ.ಎಂ. ಶರೀಫ್, ಪ್ರಧಾನ ಕಾರ್ಯದರ್ಶಿ ಎಂ.ಎಸ್. ಶರೀಫ್, ತೈಬಾ ಜುಮಾ ಮಸೀದಿ ಅಧ್ಯಕ್ಷ ಬಿ. ಅಬ್ದುಲ್ ಹಮೀದ್ ತಾಜ್ ಫಿಶ್, ಕೃಷ್ಣಾಪುರ ಈದ್ಗಾ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಹಕ್, ಬದ್ರುಲ್ ಹುದಾ ಅಧ್ಯಕ್ಷ ಅಬೂಬಕರ್ ಟಿ.ಎಂ., ಮಸ್ಜಿದುಲ್ ಬದ್ರಿಯಾ ಅಧ್ಯಕ್ಷ ಇಬ್ರಾಹಿಂ ಎನ್.ಎಂ.ಪಿ.ಟಿ. ಮಸ್ಟಿದುಲ್ ಹುದಾ ಅಧ್ಯಕ್ಷ ಕೆ.ಎಚ್. ಅಬ್ದುರ್ರಹ್ಮಾನ್, ಕೃಷ್ಣಾಪುರ ಕೇಂದ್ರ ಬದ್ರಿಯಾ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾದ ಬಿ.ಎಂ. ಉಸ್ಮಾನ್ ಹಾಜಿ, ಅಬ್ದುಲ್ ಜಲೀಲ್ ಬದ್ರಿಯ, ಬಿ.ಎಚ್. ಮುಹಮ್ಮದ್ ಹಸನ್ ಮೊದಲಾದವರು ಉಪಸ್ಥಿತರಿದ್ದರು.
ಕೃಷ್ಣಾಪುರ ಆಲ್‌ಮದ್ರಸತುಲ್ ಬದ್ರಿಯಾ ಕೇಂದ್ರ ಮದ್ರಸ ಸಮಿತಿ ಅಧ್ಯಕ್ಷ ಅಬ್ದುಲ್ ಹಕೀಂ ಫಾಲ್ಕನ್ ಸ್ವಾಗತಿಸಿದರು.