×
Ad

ಎಮ್ ಡಿಎಮ್ಎ ಮಾರಾಟ ಪ್ರಕರಣ: ಓರ್ವ ಆರೋಪಿ ಸೆರೆ

Update: 2025-12-22 22:28 IST

ಉಳ್ಳಾಲ: ಎಮ್ ಡಿಎಮ್ಎ ಕ್ರಿಸ್ಟಲ್ ಎಂಬ ಮಾದಕ ವಸ್ತುವನ್ನು ಮಾರಾಟದಲ್ಲಿ ತೊಡಗಿದ್ದ ಕೇರಳದ ಮೂಲದ ವ್ಯಕ್ತಿಯನ್ನು ಉಳ್ಳಾಲ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದಾರೆ.

ಬಂಧಿತನನ್ನು ಉಪ್ಪಳ, ಮಂಗಲ್ಪಾಡಿ ನಿವಾಸಿ ಶೇಖ್ ಮೊಹಮ್ಮದ್ ಕೈಫ್ (22) ಎಂದು ಗುರುತಿಸಲಾಗಿದೆ.

ಈತ ತಲಪಾಡಿ ಗ್ರಾಮದ ಕೆ.ಸಿ ರೋಡ್ ಫಲಾಹ್ ಶಾಲಾ ಬಸ್ಸು ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಎಮ್ ಡಿಎಮ್ಎ ಕ್ರಿಸ್ಟಲ್ ಎಂಬ ಮಾದಕ ವಸ್ತುವಿನ ಮಾರಾಟದಲ್ಲಿ ನಿರತನಾಗಿದ್ದ ಈ ಬಗ್ಗೆ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಸೋಮವಾರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ

ಬಂಧಿತ ಆರೋಪಿಯಿಂದ ಅಂದಾಜು 55,000 ರೂ. ಮೌಲ್ಯದ ನಿಷೇಧಿತ 11 ಗ್ರಾಂ ಎಮ್ ಡಿಎಮ್ಎ ಕ್ರಿಸ್ಟಲ್ ಮತ್ತು ಕೃತ್ಯಕ್ಕೆ ಬಳಸಿದ್ದ ಒಂದು ತೂಕ ಮಾಪನ,500 ರೂ.ನಗದು ಮತ್ತು ಒಂದು ಮೊಬೈಲ್ ಫೋನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. .

ಮೊಹಮ್ಮದ್ ಕೈಫ್ ಎಂಬಾತ ವಿಲಾಸಿ ಜೀವನ ನಡೆಸಲು ಉಪ್ಪಳದ ಶಮೀರ್ ಕಾಂಬ್ಳೆ ಮತ್ತು ಜಾವೀದ್ ಎಂಬವರೊಂದಿಗೆ ಸೇರಿ ಕೆಸಿ ರೋಡ್ ಫಲಾಹ್ ಶಾಲಾ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಪರಿಚಯಸ್ಥ ಗಿರಾಕಿಗಳಿಗೆ ಎಮ್ ಡಿಎಮ್ಎ ಕ್ರಿಸ್ಟಲನ್ನು ಪೂರೈಸುತ್ತಿದ್ದ ಎಂದು ತಿಳಿದು ಬಂದಿದೆ.

ಬಂಧಿತ ಶೇಖ್ ಮೊಹಮ್ಮದ್ ಕೈಫ್ ನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News