×
Ad

ಮಾಡೂರು: ಯುವಕ ನೇಣು ಬಿಗಿದು ಆತ್ಮಹತ್ಯೆ

Update: 2024-09-13 12:11 IST

ಉಳ್ಳಾಲ: ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಾಡೂರು,ತಾರಿಪಡ್ಪು ಬಳಿ ನಡೆದಿದೆ.

ತಾರಿಪಡ್ಪು ನಿವಾಸಿ ಶ್ರವಣ್ ಆಳ್ವ(25) ಆತ್ಮಹತ್ಯೆಗೈದ ಯುವಕ.

ಉಮೇಶ್ ಆಳ್ವ ಎಂಬವರ ಕಿರಿಯ ಮಗನಾದ ಶ್ರವಣ್ ಎಲೆಕ್ಟ್ರೀಷಿಯನ್ ವೃತ್ತಿ ಮಾಡುತ್ತಿದ್ದ.ನಿನ್ನೆ ರಾತ್ರಿ ಸ್ನೇಹಿತರ ಜತೆಗಿದ್ದು , ರಾತ್ರಿ ಮನೆಗೆ ಬಂದಿದ್ದ ಎನ್ನಲಾಗಿದೆ.

ಮಧ್ಯ ರಾತ್ರಿ ಶ್ರವಣ್ ನ ಅಣ್ಣ ಕೆಲಸ ಮುಗಿಸಿ ಬಂದಾಗ ಶ್ರವಣ್ ಬೆಡ್ ರೂಮಿನ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೈದಿರುವುದು ಬೆಳಕಿಗೆ ಬಂದಿದೆ.

ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲ. ಮೃತ ಶರಣ್ ಅವಿವಾಹಿತನಾಗಿದ್ದು ತಾಯಿ,ತಂದೆ,ಸಹೋದರನನ್ನು ಅಗಲಿದ್ದಾನೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News