×
Ad

ಮಂಗಳೂರು: ಬ್ಯಾಪ್ಟಿಸ್ಟ್ ರೋಡ್ರಿಗಸ್ ನಿಧನ

Update: 2023-10-03 21:41 IST

ಮಂಗಳೂರು, ಅ. 3: ಮಂಗಳೂರು ಸೈಂಟ್ ಜೋಸೆಫ್ ಮೊನೆಸ್ಟರಿಯ ಬ್ರದರ್ ಬ್ಯಾಪ್ಟಿಸ್ಟ್ ರೋಡ್ರಿಗಸ್ (79) ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಮಧ್ಯಾಹ್ನ ನಿಧನರಾದರು.

ಎಲ್ಲರಿಂದಲೂ ಪ್ರೀತಿಯಿಂದ ‘ಬಟ್ಟಿ ಬ್ರದರ್’ ಎಂದೇ ಗುರುತಿಸಿಕೊಂಡಿದ್ದ ರೋಡ್ರಿಗಸ್ ಅವರು ಬೆಳ್ಳೂರಿನ ದಿವಂಗತ ಜಾನ್ ರೋಡ್ರಿಗಸ್ ಮತ್ತು ಕೋಸೆಸ್ ರಾಡ್ರಿಗಸ್ ದಂಪತಿ ಪುತ್ರರಾಗಿ ಜೂನ್ 22, 1944 ರಂದು ಜನಿಸಿದ್ದರು.

1963ರಲ್ಲಿ ಕೇರಳದ ಅಲುವಾದಲ್ಲಿ ಕಾರ್ಮೆಲೈಟ್ ಸಂಸ್ಥೆ ಸೇರಿದ್ದ ಅವರು ಮಾರ್ಚ್ 19, 1969ರಂದು ತಮಿಳುನಾಡಿನ ಪೋದನೂರಿನಲ್ಲಿ ವೃತ್ತಿಬದುಕಿಗೆ ಪಾದಾರ್ಪಣೆ ಮಾಡಿದ್ದರು. 1974ರಲ್ಲಿ ದೀಕ್ಷೆ ಪಡೆದಿದ್ದರು. ಮೈಸೂರಿನ ಪುಷ್ಪಾಶ್ರಮ, ಮಂಗಳೂರು ಸೈಂಟ್ ಜೋಸೆಫ್ ಮೊನೆಸ್ಟರಿ, ಮಡಂತ್ಯಾರ್ ಆಶಾ ದೀಪಾ ಮತ್ತು ಕೋಟೇಶ್ವರದ ಕಾರ್ಮೆಲ್ ಆಶ್ರಮದಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ

ಬ್ರದರ್ ಬ್ಯಾಪ್ಟಿಸ್ಟ್ ರೋಡ್ರಿಗಸ್ ಅಂತ್ಯಕ್ರಿಯೆ ಶುಕ್ರವಾರ(ಅ.6) ಮಧ್ಯಾಹ್ನ 3:30ಕ್ಕೆ ಮಂಗಳೂರಿನ ಕಾರ್ಮೆಲ್‌ಹಿಲ್‌ ನಲ್ಲಿರುವ ಇನ್‌ಫೆಂಟ್ ಜೀಸಸ್ ಶ್ರೈನ್‌ನಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News