×
Ad

ಮಂಗಳೂರು: ಕಾರು ಢಿಕ್ಕಿ; ಪಾದಚಾರಿ ಯುವತಿ ಮೃತ್ಯು

Update: 2023-10-18 20:43 IST

ಮಂಗಳೂರು: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಯುವತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟು, ಮೂವರು ಬಾಲಕಿಯರು ಸೇರಿದಂತೆ ನಾಲ್ವರು ಗಾಯಗೊಂಡಿರುವ ಘಟನೆ ಮಣ್ಣಗುಡ್ಡೆ ಬಳಿ ಬುಧವಾರ ಸಂಜೆ ನಡೆದಿರುವುದು ವರದಿಯಾಗಿದೆ.

ಸುರತ್ಕಲ್‌ನ ಬಾಳ ನಿವಾಸಿ ಗಂಗಾಧರ ಎಂಬವರ ಪುತ್ರಿ ರೂಪಶ್ರೀ ( 22) ಮೃತಪಟ್ಟ ಯುವತಿ ಎಂದು ಪೊಲೀಸರು ತಿಳಿಸಿದ್ದಾರೆ.

ಈ ದುರ್ಘಟನೆಯಲ್ಲಿ ಸ್ವಾತಿ (26), ಹಿಥ್ನವಿ (16) ಕಾರ್ತಿಕಾ( 16) ಮತ್ತು ಯಥಿಕಾ(12) ಎಂಬವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಂಗಳೂರು ಮಹಾನಗರಪಾಲಿಕೆ ಈಜುಕೊಳದ ಬಳಿ ರೂಪಶ್ರೀ ತನ್ನ ಸಂಬಂಧಿಕರ ಜೊತೆ ನಡೆದುಕೊಂಡು ಹೋಗುತ್ತಿ ದ್ದಾಗ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದು ಪರಾರಿಯಾಗಿದೆ ಎಂದು ತಿಳಿದುಬಂದಿದೆ.

ತಕ್ಷಣ ಪೊಲೀಸರು ಕಾರ್ಯಾಚರಣೆ ನಡೆಸಿ ಅಪಘಾತಕ್ಕೆ ಕಾರಣವಾದ ಹೋಂಡಾ ಇಯಾನ್ ಕೆಎ-19-ಎಮ್‌ಡಿ-5676 ಕಾರು ಹಾಗೂ ಚಾಲಕ ಕಮಲೇಶ್ ಬಲದೇವ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ಬಗ್ಗೆ ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News