×
Ad

ಮಂಗಳೂರು : ಗ್ರೀನ್ ವ್ಯೂ ಸಂಸ್ಥೆಯಲ್ಲಿ ದಂತ ಚಿಕಿತ್ಸಾ ಶಿಬಿರ

Update: 2023-07-31 22:15 IST

ಮಂಗಳೂರು : ಯೆನೆಪೋಯ ಡೆಂಟಲ್ ಹಾಸ್ಪಿಟಲ್‌ನ ಹಲವು ವೈದ್ಯರನ್ನೊಳಗೊಂಡ ಸುಮಾರು 22 ಮಂದಿಯ ತಂಡ ಇಂದು ಜಮೀಯ್ಯತುಲ್ ಫಲಾಹ್ ಗ್ರೀನ್ ವ್ಯೂ ಶಾಲೆಯಲ್ಲಿ ದಂತ ಚಿಕಿತ್ಸಾ ಶಿಬಿರವನ್ನು ಯಶಸ್ವಿಯಾಗಿ ನರವೇರಿಸಿದರು.

ವಿದ್ಯಾರ್ಥಿಗಳೂ ಹಾಗೂ ಶಿಕ್ಷಕಿಯರು ಶಿಬಿರದ ಪ್ರಯೋಜನ ಪಡೆದರು.

ಶಿಬಿರದ ಪ್ರಾರಂಭದಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಾಲೆ ಹಾಗೂ ಸಂಸ್ಥೆಯ ಬಗ್ಗೆ ವೈದ್ಯರನ್ನೊಳಗೊಂಡ ತಂಡಕ್ಕೆ ಸಂಸ್ಥೆಯ ಸಂಚಾಲಕರಾದ ಫರ್ವೇಝ್ ಆಲಿ ಅವರು ವಿವರಿಸಿದರು, ಯೆನೆಪೋಯ ಸಂಸ್ಥೆಗೆ ಧನ್ಯವಾದ ಅರ್ಪಿಸಿದರು.

ಶಿಬಿರದ ನಾಯಕತ್ವ ವಹಿಸಿದ್ದ ಡಾ. ರಾಜೇಶ್ ಅವರು ಶಿಬಿರದ ಪ್ರಯೋಜನವನ್ನು ವಿವರಿಸಿದರು. ಶಾಲೆಯ ಶೈಕ್ಷಣಿಕ ಹಾಗೂ ಆಡಳಿತ ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಬಿರದ ಕೊನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಟೂತ್ ಬ್ರಷ್ ಹಾಗೂ ಪೇಸ್ಟ್ ನೀಡಲಾಯಿತು.

ಪ್ರಾಂಶುಪಾಲರಾದ ಅಬೂಬಕ್ಕರ್ ಅವರು ಸ್ವಾಗತಿಸಿದರು. ಉಪ ಪ್ರಾಂಶುಪಾಲೆ ಅಸ್ಮಾ ಬಾನು ಕಾರ್ಯಕ್ರಮ ನಿರೂಪಿಸಿದರು.
















 


 


 


 


 


 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News