×
Ad

ಮಂಗಳೂರು: ವೈಷ್ಣೋದೇವಿಯ ಕಾಯಿನ್ ನೆಪದಲ್ಲಿ ವಂಚನೆ

Update: 2023-09-02 22:33 IST

ಮಂಗಳೂರು, ಸೆ.2: ವೈಷ್ಣೋದೇವಿಯ ಕಾಯಿನ್ ನೆಪದಲ್ಲಿ 27,700 ರೂ. ವಂಚನೆ ಮಾಡಿರುವ ಮೋಹಿತ್ ಅಗರ್‌ವಾಲ್ ಮತ್ತು ಮನೋಜ್ ಕುಮಾರ್ ಎಂಬವರ ವಿರುದ್ಧ ವ್ಯಕ್ತಿಯೊಬ್ಬರು ನಗರದ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

ಆ.29ರಂದು ಬೆಳಗ್ಗೆ 11ಕ್ಕೆ ಫೇಸ್‌ಬುಕ್‌ನಲ್ಲಿ ವೈಷ್ಣೋದೇವಿ ಮಂದಿರದ ಕಾಯಿನ್ ಇದ್ದಲ್ಲಿ ಅದಕ್ಕೆ ಉತ್ತಮ ಬೆಲೆಯನ್ನು ನೀಡುವುದಾಗಿ ಜಾಹೀರಾತು ಬಂದಿತ್ತು. ಇದನ್ನು ನೋಡಿದ ತಾನು ತನ್ನಲ್ಲಿದ್ದ ಕಾಯಿನ್ ಮಾರಾಟ ಮಾಡಲು ಮುಂದಾದೆ. ಹಾಗೇ ಜಾಹೀರಾತಿನಲ್ಲಿದ್ದ ಮೊಬೈಲ್ ನಂಬರ್ ಸಂಪರ್ಕಿಸಿ ವಿಷಯ ತಿಳಿಸಿದಾಗ 24,56,000ರೂ. ನೀಡುವುದಾಗಿ ನಂಬಿಸಿದ್ದ. ಆ ಹಣದ ವರ್ಗಾವಣೆ ನೆಪದಲ್ಲಿ ಹಂತಹಂತವಾಗಿ ತನ್ನಿಂದ 27,700 ರೂ. ಪಡೆದು ಬಳಿಕ ವಂಚಿಸಿರುವುದಾಗಿ ವಂಚನೆಗೊಳಗಾದ ವ್ಯಕ್ತಿ ದೂರು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News