×
Ad

ಮಂಗಳೂರು| ಚಿನ್ನಾಭರಣ ಕಳವು ಪ್ರಕರಣ: ಆರೋಪಿ ಸೆರೆ

Update: 2024-09-04 16:52 IST

ಮಂಗಳೂರು, ಸೆ.4: ನಗರದ ಎಯ್ಯಾಡಿಯ ದಂಡಕೇರಿ ಎಂಬಲ್ಲಿನ ಮನೆಯೊಂದರಿಂದ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಕನಾಡಿ ನಗರ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಎಯ್ಯಾಡಿ ದಂಡಕೇರಿಯ ಸಾಗರ್ (23) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯಿಂದ ಸುಮಾರು 1.70 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ ಸ್ಕೂಟರ್ ವಶಪಡಿಸಲಾಗಿದೆ.

ಮನೆಯ ಯಜಮಾನಿ ಮಮತಾ ಆ.25ರಂದು ಪದವಿನಂಗಡಿಗೆ ತೆರಳಿದ್ದರು. ಬಾಗಿಲಿನ ಬೀಗವನ್ನು ಹಾಕಿ ಕೀಯನ್ನು ಮನೆಯ ಹೊರಗಡೆ ಮೀಟರ್ ಬೋರ್ಡ್ ಮೇಲೆ ಇಟ್ಟಿದ್ದರು. ಆ.28ರಂದು ಮನೆಗೆ ಬಂದು ನೋಡಿದಾಗ ಚಿನ್ನದ ರಿಂಗ್‌ಗಳು, ಬ್ರೇಸ್‌ಲೆಟ್ ಸಹಿತ ಚಿನಾಭರಣ ಕಳವಾಗಿತ್ತು. ಈ ಬಗ್ಗೆ ಆ.31ಕ್ಕೆ ಪ್ರಕರಣ ದಾಖಲಿಸಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News