ಮಂಗಳೂರು: ಈದ್ಗಾ ಮಸೀದಿಯಲ್ಲಿ ʼಇಲಲ್ ಮದೀನಾʼ ಕಾರ್ಯಕ್ರಮ
Update: 2025-09-05 19:46 IST
ಮಂಗಳೂರು, ಸೆ.5: ಮಸ್ಜಿದ್ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿ ಮತ್ತು ಈದ್ಗಾ ಮಸೀದಿ ಬಾವುಟಗುಡ್ಡ ಹಾಗೂ ಜಲಾಲ್ ಮಸ್ತಾನ್ ಮುಹಮ್ಮದ್ ಮೌಲ ಹಿಫ್ಲುಲ್ ಖುರಾನ್ ಅರಬಿಕ್ ಕಾಲೇಜು ಇದರ ವತಿಯಿಂದ ಈದ್ಗಾ ಜುಮಾ ಮಸೀದಿಯಲ್ಲಿ ಇಲಲ್ ಮದೀನಾ ಸಮಾರೋಪ ಕಾರ್ಯಕ್ರಮವು ಶುಕ್ರವಾರ ನಡೆಯಿತು.
ದ.ಕ. ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್-ಅಝ್ಹರಿ ದುಆಗೈದು ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಅಹ್ಮದ್ ನಈಂ ಫೈಝಿ ಅಲ್ ಮಅಬರಿ ಪೇರಡ್ಕ ಮೀಲಾದ್ ಸಂದೇಶ ನೀಡಿದರು.
ಈದ್ಗಾ ಮಸೀದಿಯ ಖತೀಬ್ ಮುಸ್ತಫಾ ಅಝ್ಹರಿ, ಝೀನತ್ ಭಕ್ಷ್ ಕೇಂದ್ರ ಮಸೀದಿಯ ಉಪಾಧ್ಯಕ್ಷ, ಮಾಜಿ ಮೇಯರ್ ಕೆ. ಅಶ್ರಫ್ ಕೆ.ಇ, ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್, ಕೋಶಾಧಿಕಾರಿ ಹಾಜಿ ಎಸ್.ಎಂ. ರಶೀದ್, ಸಮಿತಿಯ ಸದಸ್ಯರಾದ ಅದ್ದು ಹಾಜಿ, ಅಬ್ದುಲ್ ಸಮದ್ ಹಾಜಿ, ಸಿ. ಮಹ್ಮೂದ್ ಹಾಜಿ ಮತ್ತಿತರರು ಉಪಸ್ಥಿತರಿದ್ದರು.