×
Ad

ಮಂಗಳೂರು: ಎಂಸಿಸಿ ಬ್ಯಾಂಕ್ ಆಡಳಿತ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Update: 2023-08-16 22:46 IST

ಮಂಗಳೂರು, ಆ.16: ನಗರದ ಎಂಸಿಸಿ ಬ್ಯಾಂಕ್ ಆಡಳಿತ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆ.15ರಂದು ನಡೆಯಿತು.

ಈ ಸಂದರ್ಭ ಅವರ್ ಲೇಡಿ ಆಫ್ ಮಿಲಾಗ್ರಿಸ್ ಚರ್ಚ್‌ನ ಧರ್ಮಗುರು ವಂ. ಬೋನವೆಂಚರ್ ನಜರೆತ್ ಮಾತನಾಡಿದರು.

ಸಾಮಾಜಿಕ ಕಾರ್ಯಕರ್ತ ಹಾಗೂ ಬ್ಯಾಂಕ್ ಗ್ರಾಹಕ ಸುನಿಲ್ ಕುಮಾರ್ ಬಜಾಲ್ ಮುಖ್ಯ ಅತಿಥಿಯಾಗಿ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ, ಜನರಲ್ ಮ್ಯಾನೇಜರ್ ಸುನಿಲ್ ಮಿನೇಜಸ್ ವೇದಿಕೆಯಲ್ಲಿದ್ದರು.

ಅಧ್ಯಕ್ಷರಾದ ಅನಿಲ್ ಲೋಬೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಮತ್ತು ಗೌರವಿಸುವ ದಿನವಾದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಸಂಪ್ರದಾಯವನ್ನು ಬ್ಯಾಂಕ್ ಮುಂದುವರಿಸುತ್ತಿದೆ. ಬ್ಯಾಂಕ್ ತನ್ನ 110 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಸಂದರ್ಭ ರಾಷ್ಟ್ರದ ಜವಾಬ್ದಾರಿಯುತ ಹಣಕಾಸು ಸಂಸ್ಥೆಯಾಗಿ, ದೀನದಲಿತರಿಗೆ ಮತ್ತು ಸೌಲಭ್ಯ ವಂಚಿತರಿಗೆ ಸಹಾಯ ಮಾಡಿದೆ ಎಂದು ಹೇಳಿದರು. 

ನಿರ್ದೇಶಕರಾದ ಡೇವಿಡ್ ಸೋಜ, ಹೆರಾಲ್ಡ್ ಮೊಂತೇರೊ, ಜೆ.ಪಿ. ರೊಡ್ರಿಗಸ್ ಇವರನ್ನು ಸನ್ಮಾನಿಸಲಾಯಿತು. ಮ್ಯಾಕ್ಸಿಮ್ ಲಸ್ರಾದೊರನ್ನು ಗೌರವಿಸಲಾಯಿತು. 

ನಿರ್ದೇಶಕರಾದ ಡಾ. ಜೆರಾಲ್ಡ್ ಪಿಂಟೊ, ಆಂಡ್ರ್ಯೂ ಡಿಸೋಜ , ಅನಿಲ್ ಪತ್ರಾವೊ, ಎಲ್ರಾಯ್ ಕಿರಣ್ ಕ್ರಾಸ್ಟೊ, ರೋಶನ್ ಡಿ ಸೋಜ, ಮಾರ್ಸೆಲ್ ಡಿಸೋಜ ಮತ್ತು ಐರಿನ್ ರೆಬೆಲ್ಲೊ, ವೃತ್ತಿಪರ ನಿರ್ದೇಶಕರಾದ ಸುಶಾಂತ್ ಸಲ್ಡಾನ್ಹಾ ಮತ್ತು ಕ್ಲೆಮೆಂಟ್ ಪಿಂಟೋ, ಆಡಳಿತ ಮಂಡಳಿಯ ಸದಸ್ಯ ಶರ್ಮಿಳಾ ಮಿನೇಜಸ್, ಫೆಲಿಕ್ಸ್ ಡಿಕ್ರೂಜ್ ಈ ಸಂದರ್ಭ ಉಪಸ್ಥಿತರಿದ್ದರು.

ಕಾರ್ಕಳ ಶಾಖಾ ಪ್ರಬಂಧಕ ರಾಯನ್ ಪ್ರವೀಣ್ ಕೆ. ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ವ್ಯವಸ್ಥಾಪಕ ಸುನಿಲ್ ಮಿನೇಜಸ್ ವಂದಿಸಿದರು. ಕ್ಯಾರೆನ್ ಕ್ರಾಸ್ತಾ ಮತ್ತು ತಂಡದವರು ಪ್ರಾರ್ಥನಾ ಗೀತೆ ಹಾಡಿದರು.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News