×
Ad

ಮಂಗಳೂರು: ನ.9ರಿಂದ ಮಂಗಳೂರಿನಲ್ಲಿ ಕರ್ನಾಟಕ ರಾಜ್ಯ ರೋಲರ್ ಸ್ಕೇಟಿಂಗ್ ಸ್ಪರ್ಧೆ

Update: 2023-11-07 22:18 IST

ಮಂಗಳೂರು: ಕರ್ನಾಟಕ ರಾಜ್ಯ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ಸಹಯೋಗದಲ್ಲಿ ದಕ್ಷಿಣ ಕನ್ನಡ ರೋಲರ್ ಸ್ಕೇಟಿಂಗ್ ವತಿಯಿಂದ 39ನೆ ಕರ್ನಾಟಕ ರಾಜ್ಯ ಸ್ಫೀಡ್ ರೋಲರ್ ಸ್ಕೇಟಿಂಗ್ ಪಂದ್ಯಾಟ ನಗರದ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ನ.9 ರಿಂದ 12 ರ ವರೆಗೆ ಜರಗಲಿದೆ ಎಂದು ಸ್ಕೇಟಿಂಗ್ ಪಂದ್ಯಾಟ ಸಮಿತಿ ಅಧ್ಯಕ್ಷ ಹಾಗೂ ಮೇಯರ್ ಸುಧೀರ್ ಶೆಟ್ಟಿ ಅವರು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಒಟ್ಟು 5 ವಿಭಾಗಗಳಲ್ಲಿ ಪಂದ್ಯಾಟ ನಡೆಯಲಿದೆ.ನ.9 ರಂದು ಸಂಜೆ 5 ಗಂಟೆಗೆ ಪಂದ್ಯಾಟ ಉದ್ಘಾಟನೆಗೊಳ್ಳಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಪಂದ್ಯಾಟವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ, ಪೊಲೀಸ್ ಆಯುಕ್ತ ಅನೂಪ್ ಅಗರ್‌ವಾಲ್, ಮನಪಾ ಆಯುಕ್ತ ಆನಂದ್ ಮುಂತಾದವರು ಅತಿಥಿಗಳಾಗಿ ಭಾಗಹಿಸಲಿರು ತ್ತಾರೆ ಎಂದು ಸ್ಕೇಟಿಂಗ್ ಪಂದ್ಯಾಟ ಸಮಿತಿ ಅಧ್ಯಕ್ಷ ಸುಧೀರ್ ಶೆಟ್ಟಿ ಅವರು ತಿಳಿಸಿದರು.

ಸ್ಕೇಟಿಂಗ್ ಸಂಸ್ಥೆಯ ಪ್ರಮುಖರಾದ ಜಯ ಕುಮಾರ್, ಶ್ರೀಕಾಂತ್, ಜೈರಾಜ್, ಫ್ರಾನ್ಸಿಸ್ , ಸಂತೋಷ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News